SHIVAMOGGA LIVE NEWS | 27 MARCH 2023
SHIMOGA : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲಿನ ದಾಳಿ (Attack) ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ರಕ್ಷಣಾಧಿಕಾರಿ ಹೇಳಿದ್ದಿಷ್ಟು
‘ತಾಲೂಕು ಕಚೇರಿಗೆ ಮನವಿ ಸಲ್ಲಿಸಲು ಸುಮಾರು ಒಂದೂವರೆ ಸಾವಿರದಷ್ಟು ಜನರು ಬಂದಿದ್ದರು. ಸೂಕ್ತ ಬಂದೋಬಸ್ತ್, ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು. ನೂಕಾಟ, ತಳ್ಳಾಟ ಉಂಟಾಯಿತು. ನಮ್ಮ ನಾಲ್ವರು ಸಿಬ್ಬಂದಿಗೆ ಗಾಯವಾಗಿದೆ. ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. KSRP ತುಕಡಿ, ಬೇರೆಡೆಯಿಂದ ಅಧಿಕಾರಿಗಳನ್ನು ಕರೆಯಿಸಿ ಬಂದೋಬಸ್ತ್ ಮಾಡುತ್ತಿದ್ದೇವೆ. ಈಗ ಪರಿಸ್ಥಿತಿ ತಣ್ಣಗಾಗಿದೆ. ಯಾವುದೆ ಅಹಿತಕರ ಘಟನೆಗಳು ಆಗಿಲ್ಲ’ ಎಂದು ಮಿಥುನ್ ಕುಮಾರ್ ತಿಳಿಸಿದರು.
ಇದನ್ನೂ ಓದಿ – ಮನೆ ಮೇಲೆ ಕಲ್ಲು ತೂರಾಟ, ಮಾಜಿ ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ, ಹೇಳಿಕೆಯ 5 ಪಾಯಿಂಟ್ ಇಲ್ಲಿದೆ