ಮೂರು ಲಾರಿಗಳಲ್ಲಿ ಡಿಸೇಲ್‌ ಕದ್ದ ಶಿವಮೊಗ್ಗದ ಇಬ್ಬರು ಶಿರಾಳಕೊಪ್ಪದಲ್ಲಿ ಅರೆಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿಕಾರಿಪುರ: ಇಲ್ಲಿನ ವಿಜಯಲಕ್ಷ್ಮಿ ರೈಸ್ ಮಿಲ್‌ ಆವರಣದಲ್ಲಿ ನಿಲ್ಲಿಸಿದ್ದ 3 ಲಾರಿಗಳ ಡೀಸೆಲ್ (Diesel) ಟ್ಯಾಂಕ್‌ನಲ್ಲಿದ್ದ ಅಂದಾಜು 45,000 ರೂ. ಮೌಲ್ಯದ 450 ಲೀಟರ್ ಡೀಸೆಲ್ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ನಗರದ ಟಿಪ್ಪುನಗರದ ಸೋನು (26), ಬರ್ಮಪ್ಪ ನಗರದ ಸೈಯದ್ ಹುಸೇನ್ (25) ಬಂಧಿತರು.

Shiralakoppa police nab diesel theives

ಈ ಬಗ್ಗೆ ಮಾಲೀಕ ಸೊರಬ ತಾಲ್ಲೂಕು ಕೋಲಗುಣಸಿ ನಿವಾಸಿ ವಿಕ್ರಂ ಭಟ್ ಅವರು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿತರಿಂದ ಅಂದಾಜು 9 ಲಕ್ಷ ರೂ. ಮೌಲ್ಯದ ಟಾಟಾ ಇಂಟ್ರಾ ಗೂಡ್ಸ್ ವಾಹನ, 15,000 ರೂ. ನಗದು ಮತ್ತು 30 ಲೀಟರ್ ಸಾಮರ್ಥ್ಯದ 5 ಖಾಲಿ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

JNNCE-ADMISSION-2025-26

ಶಿಕಾರಿಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಇ.ಕೇಶವ ಅವರ ಮೇಲ್ವಿಚಾರಣೆಯಲ್ಲಿ ಸಿಪಿಐ ಸಂತೋಷ್ ಪಾಟೀಲ್, ಟಿ.ಬಿ.ಪ್ರಶಾಂತ್ ಕುಮಾರ್, ಆರ್.ಸಂತೋಷ ಕುಮಾರ್, ಜಿ. ರಾಕೇಶ್ ಮತ್ತು ಸಲ್ಮಾನ್ ಖಾನ್ ಹಾಜಿ ಅವರನ್ನೊಳಗೊಂಡ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದೆ‌.

ಇದನ್ನೂ ಓದಿ » ಸಿಗಂದೂರು ಸೇತುವೆ, ತಲೆ ಮೇಲೆ ಕ್ಲಾಂಪ್‌ ಬಿದ್ದು ಕಾರ್ಮಿಕ ಸಾವು, ಸಂಸದ ರಾಘವೇಂದ್ರ ವಿಷಾದ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment