ಶಿಕಾರಿಪುರದಲ್ಲಿ ಯಡಿಯೂರಪ್ಪ ಜನ್ಮದಿನ ಅದ್ಧೂರಿ ಆಚಾರಣೆ, ಸಾವಿರ ಸಾವಿರ ಜನ ಭಾಗಿ, ಯಾರೆಲ್ಲ ಏನೆಲ್ಲ ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿಕಾರಿಪುರ: ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಏಕೈಕ ಗುರಿಯೊಂದಿಗೆ ಮುನ್ನಡೆಯುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yediyurappa) ಹೇಳಿದರು.

ಕುಮದ್ವತಿ ಕಾಲೇಜು ಆವರಣದ ಏಕಲವ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಯಡಿಯೂರಪ್ಪ ಅವರ 84ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮಾತು ಸಾಧನೆಯಾಗಬಾರದು. ಬದಲಿಗೆ ಸಾಧನೆಯೇ ಮಾತು ಆಗಬೇಕು ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವನು ನಾನು. ಅದಕ್ಕೆ ಶ್ರಮವಹಿಸಿ ಕೆಲಸ ಮಾಡುವುದು ಅಗತ್ಯ. ಶೋಷಿತರ, ದಮನಿತರ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ರೈತರು ಸ್ವಾವಲಂಬಿ ಆಗಲು ರಾಜ್ಯದ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದರು.

ಇದನ್ನೂ ಓದಿ – ಊರುಗಡೂರಿನ ಸಂಕೇತ್‌ ಮನೆಗೆ ಸಂಸದ ರಾಘವೇಂದ್ರ ಭೇಟಿ, ಒಂದು ಲಕ್ಷ ರುಪಾಯಿ ನೆರವು

ಶಿಕಾರಿಪುರ, ಶಿವಮೊಗ್ಗದ ರೀತಿ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಈ ಭ್ರಷ್ಟ ವ್ಯವಸ್ಥೆ ಕಿತ್ತೊಗೆದು ನಾಡಿನ ಜನರು ನೆಮ್ಮದಿಯ ಬದುಕು ಕಟ್ಟಿಕೊಡಲು ಟೊಂಕ ಕಟ್ಟುವೆ ಎಂದು ಹೇಳಿದರು.

Why did BS Yediyurappa pledge to bring BJP back to power on his 84th birthday? Read the highlights of the grand celebration in Shikaripura and key speeches by Pralhad Joshi and BY Vijayendra.

ಯಾರೆಲ್ಲ ಏನೆಲ್ಲ ಹೇಳಿದರು?

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆಗೆದವರು ಬಿ.ಎಸ್.ಯಡಿಯೂರಪ್ಪ. ನಮ್ಮೆಲ್ಲಾ ಕಾರ್ಯಕರ್ತರಿಗೆ ಇದೊಂದು ಸ್ಫೂರ್ತಿಯ ದಿನ. ಯಡಿಯೂರಪ್ಪ ಅವರ ಬದುಕಿನ ಪ್ರತಿ ಹೆಜ್ಜೆಯೂ ಪಕ್ಷ ಕಟ್ಟಲು ಸೀಮಿತವಾಗಿವೆ. ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
Why did BS Yediyurappa pledge to bring BJP back to power on his 84th birthday? Read the highlights of the grand celebration in Shikaripura and key speeches by Pralhad Joshi and BY Vijayendra.
ತಂದೆಯ ಸಂಕಲ್ಪ ಶಕ್ತಿ ಅದ್ಭುತವಾದುದು. ಎಂಟು ಬಾರಿ ಶಾಸಕ, ಸಂಸದರಾಗಿ ವಿಪಕ್ಷ ನಾಯಕರಾಗಿ, ನಾಲ್ಕು ಬಾರಿ ಸಿಎಂ ಆಗಿ ಮಾಡಿದ್ದು ಶಿಕಾರಿಪುರದ ಮಹಾಜನತೆ. ಸಂಘ ಪರಿವಾರದ ಹಿರಿಯರ ಆಶಯದಂತೆ ಪಕ್ಷವನ್ನು ಕಟ್ಟಿ ಬೆಳೆಸಿದರು. ಎಲ್ಲ ಸಮಾಜಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿದರು. ಬಿ.ವೈ.ವಿಜಯೇಂದ್ರ, ಶಿಕಾರಿಪುರ ಶಾಸಕ
y2
ಶಿಕಾರಿಪುರ ತಾಲೂಕನ್ನು ಶೂನ್ಯದಿಂದ ಅಭಿವೃದ್ಧಿಯೆಡೆಗೆ ಕೊಂಡೊಯ್ದ ನಾಯಕರು ಯಡಿಯೂರಪ್ಪ. ಇಂದು ಅವರ ಅಭಿಮಾನಿಗಳು ಹಬ್ಬದ ರೀತಿ ಆಚರಿಸುತ್ತಿದ್ದಾರೆ. ನಮ್ಮ ಪಾಲಿಗೆ ಇದೊಂದು ಸುದಿನ ಮತ್ತು ಯಡಿಯೂರಪ್ಪ ಅವರ ಮತ್ತು ನಮ್ಮೆಲ್ಲರ ಸುಕೃತ. ಜನತೆಯ ಅಭಿಮಾನದ ಮೌಲ್ಯಕ್ಕೆ ಯಾವುದೂ ಸರಿಸಮ ಅಲ್ಲ.ಬಿ.ವೈ.ರಾಘವೇಂದ್ರ, ಸಂಸದ
Why did BS Yediyurappa pledge to bring BJP back to power on his 84th birthday? Read the highlights of the grand celebration in Shikaripura and key speeches by Pralhad Joshi and BY Vijayendra.

ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ವಿರಕ್ತಮಠದ ಶ್ರೀಗಳು, ಸಾಲೂರು ಶ್ರೀಗಳು, ಕಡೇನಂದಿಹಳ್ಳಿ ಶ್ರೀಗಳು, ಶಿರಾಳಕೊಪ್ಪದ ಶ್ರೀಗಳು, ತಿಪ್ಪಾಯಿಕೊಪ್ಪದ ಕಣಸೋಗಿ ಶ್ರೀಗಳು, ಮರಾಠಾ ಸಮಾಜ, ಬಂಜಾರ ಸಮಾಜದ ಶ್ರೀಗಳು, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಶ್ರೀರಾಮುಲು, ಪ್ರಭು ಚವ್ಹಾಣ್‌, ಬಿ.ಸಿ.ಪಾಟೀಲ್‌, ಎಂಎಲ್‌ಸಿ ಸಿ.ಟಿ.ರವಿ, ರೂಪಾಲಿ ನಾಯಕ್, ಪಿ.ಸಿ.ಮೋಹನ್‌, ನಾರಾಯಣಸ್ವಾಮಿ, ಶಾಸಕ ಚನ್ನಬಸಪ್ಪ, ಸಿದ್ದು ಪಾಟೀಲ್, ಎ.ಎಸ್. ಪದ್ಮನಾಭ ಭಟ್, ಕೆ.ಎಸ್.ಗುರುಮೂರ್ತಿ ಇತರರಿದ್ದರು.

Why did BS Yediyurappa pledge to bring BJP back to power on his 84th birthday? Read the highlights of the grand celebration in Shikaripura and key speeches by Pralhad Joshi and BY Vijayendra.
280226 BS Yedyurappa 83 Birthday in Shikaripura
Why did BS Yediyurappa pledge to bring BJP back to power on his 84th birthday? Read the highlights of the grand celebration in Shikaripura and key speeches by Pralhad Joshi and BY Vijayendra.
number-1-advt-copy-new.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment