SHIVAMOGGA LIVE NEWS | 27 MARCH 2023
BENGALURU : ತಮ್ಮ ಮನೆ ಮೇಲೆ ಕಲ್ಲು ತೂರಾಟದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ (Reaction) ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅವರು ಹೇಳಿದ ಐದು ಪ್ರಮುಖ ಸಂಗತಿ ಇಲ್ಲಿದೆ.
ಐದು ಪ್ರಮುಖ ವಿಚಾರ
ಬಂಜಾರ ಸಮುದಾಯದವರ ಸಹಕಾರದಿಂದ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ನಾಳೆ, ನಾಡಿದ್ದು ಶಿಕಾರಿಪುರಕ್ಕೆ ತೆರಳಿ ಅವರೆಲ್ಲರನ್ನು ಕರೆಯಿಸಿ ಮಾತನಾಡುತ್ತೇನೆ. ಸಮಾಜದ ಮುಖಂಡರೊಂದಿಗೆ ಘಟನೆಗೆ ಕಾರಣವೇನು, ಹಿನ್ನಲೆ ಏನು ಎಂಬುದರ ಕುರಿತ ಅವಲೋಕನ ಮಾಡುತ್ತೇನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಂಡ ಅಭಿವೃದ್ಧಿ, ಸೂರಗೊಂಡನಕೊಪ್ಪದ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಿದ್ದೇನೆ. ಬಂಜಾರ ಸಮಾಜದವರು ಯಾವುದೆ ಅಹಿತಕರ ಘಟನೆಗೆ ಅವಕಾಶ ಕೊಡಬಾರದು. ಶಾಂತ ರೀತಿಯಿಂದ ವರ್ತಿಸಬೇಕು. ಶಿಕಾರಿಪುರ ಅತ್ಯಂತ ಶಾಂತವಾದ ತಾಲೂಕು.
50 – 60 ವರ್ಷದಿಂದ ತಾಲೂಕಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಮನೆ ಮೇಲೆ ದಾಳಿಯಾದ ವಿಚಾರ ತಿಳಿದು ನೋವಾಯಿತು. ತಕ್ಷಣ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ. ಯಾರ ವಿರುದ್ಧವು ಕ್ರಮ ಕೈಗೊಳ್ಳಬೇಡಿ. ಯಾರನ್ನು ಬಂಧಿಸಬೇಡಿ. ನಾನು ಬಂದು ಬಗೆ ಹರಿಸುತ್ತೇನೆ ಎಂದು ಮನವಿ ಮಾಡಿದ್ದೇನೆ. ಇಬ್ಬರು ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಸದ್ಯ ಶಿಕಾರಿಪುರ ಶಾಂತಿಯುತವಾಗಿದೆ.
ಘಟನೆಗೆ ಯಾರದ್ದಾದರೂ ಕುಮ್ಮಕ್ಕು ಇದೆಯೋ ಇಲ್ಲವೊ ಅನ್ನುವುದರ ಕುರಿತು ಈ ಸಂದರ್ಭದಲ್ಲಿ ಏನೂ ಹೇಳುವುದಿಲ್ಲ. ಪ್ರತ್ಯಕ್ಷವಾಗಿ ಜನರನ್ನು ಭೇಟಿಯಾಗದೆ ಆರೋಪ ಮಾಡುವುದಿಲ್ಲ. ಯಾವ ನಾಯಕರು ಯಾರ ವಿರುದ್ಧವು ಆರೋಪ ಮಾಡುವುದು ಬೇಡ. ಘಟನೆಗೆ ಯಾರದ್ದೇ ಕೈವಾಡ ಇಲ್ಲ. ತಪ್ಪು ಗ್ರಹಿಕೆಯಿಂದ ಸಮಸ್ಯೆಯಾಗಿರಬಹುದು.
ಇದನ್ನೂ ಓದಿ – ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಬ್ಯಾನರ್, ಸೀರೆಗೆ ಬೆಂಕಿ, ಲಾಠಿ ಚಾರ್ಜ್
ಬಂಜಾರ ಸಮಾಜದ ಮುಖಂಡರು ಯಾವುದೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಅವಕಾಶವಿದೆ. ಅವರ ಸಮಸ್ಯೆಗಳ ಕುರಿತು ಚರ್ಚೆ ಮಾಡಬಹುದು. ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಅವರು ಕೈಗೊಂಡಿರುವ ನಿರ್ಧಾರಕ್ಕೆ ಶೇ.90 ಭಾಗ ಸ್ವಾಗತ ಮಾಡಿದ್ದಾರೆ. ಸಣ್ಣಪುಟ್ಟ ತಪ್ಪುಗಳಿದ್ದರೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬಹುದು.
ಇದನ್ನೂ ಓದಿ – ಶಿಕಾರಿಪುರದಲ್ಲಿ ಈಗ ಹೇಗಿದೆ ಪರಿಸ್ಥಿತಿ? ಸೆಕ್ಷನ್ 144 ಜಾರಿ ಬಗ್ಗೆ ಪೊಲೀಸ್ ಇಲಾಖೆ ಹೇಳಿದ್ದೇನು?