SHIVAMOGGA LIVE NEWS | 8 MARCH 2023
SHIMOGA : ಮೊಪೆಡ್ ಗೆ KSRTC ಬಸ್ ಡಿಕ್ಕಿಯಾಗಿ (accident) ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕರಿಬಸಪ್ಪ (67) ಎಂಬುವವರು ಮೃತಪಟ್ಟಿದ್ದು, ಬಸವರಾಜು (37) ಎಂಬುವವರಿಗೆ ಗಾಯವಾಗಿದೆ. ಶಿವಮೊಗ್ಗ ತಾಲೂಕು ಬುಳ್ಳಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಟಿವಿಎಸ್ ಮೊಪೆಡ್ ವಾಹನದಲ್ಲಿದ್ದವರು ಬುಳ್ಳಾಪುರ ಗ್ರಾಮದಲ್ಲಿನ ಮನೆಗೆ ತೆರಳುತ್ತಿದ್ದರು. ಈ ವೇಳೆ ಹೊನ್ನಾಳಿ ಕಡೆಯಿಂದ ಬಂದ KSRTC ಬಸ್ ಡಿಕ್ಕಿ (accident) ಹೊಡೆದಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಐರಾವತದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ದಂಪತಿಗೆ ಬಸ್ ನಿಲ್ದಾಣದಲ್ಲಿ ಕಾದಿತ್ತು ಶಾಕ್, ತಡವಾಗಿ ದೂರು ದಾಖಲು