ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 17 AUGUST 2023
HOLEHONNURU : ತೋಟದಲ್ಲಿ ಅಡಿಕೆ ಕಳ್ಳತನ (Adike Theft) ಮಾಡಿಕೊಂಡು ಹೋಗುತ್ತಿದ್ದವರನ್ನು ಗ್ರಾಮಸ್ಥರೆ ಬೆನ್ನಟ್ಟಿ ಹಿಡಿದಿದ್ದಾರೆ. ಮೂವರ ಪೈಕಿ ಒಬ್ಬಾತ ತಪ್ಪಿಸಿಕೊಂಡಿದ್ದು, ಇನ್ನಿಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊಳೆಹೊನ್ನೂರು ಸಮೀಪದ ಹೊಸ ಜಂಭರಗಟ್ಟೆ (Hosa Jambharaghatta) ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನಂಜಪ್ಪ ಎಂಬುವವರ ತೋಟದಿಂದ ರಾತ್ರಿ ಅಡಿಕೆ ಕಳ್ಳತನ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ನಂಜಪ್ಪ ಅವರಿಗೆ ಮಾಹಿತಿ ತಿಳಿಸಿದ್ದರು. ಗ್ರಾಮಸ್ಥರ ಜೊತೆಗೆ ನಂಜಪ್ಪ ಅವರು ಕಳ್ಳರನ್ನು ಹಿಡಿಯಲು ಮುಂದಾದಾಗ ಬಾಬು ಎಂಬಾತ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಸ್ನೇಹಿತನ ಮಗನ ಅಪಹರಣ, ಕುಮದ್ವತಿಯಲ್ಲಿ ಮುಳುಗಿಸಿ ಕೊಲೆ, ಶಿಕ್ಷೆ ಪ್ರಕಟಿಸಿದ ಶಿವಮೊಗ್ಗ ನ್ಯಾಯಾಲಯ
ಅಣ್ಣಪ್ಪ ಮತ್ತು ಮಂಜು ಎಂಬುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಅವರ ಬಳಿ ಸುಮಾರು 10 ಕೆ.ಜಿ. ಹಸಿ ಅಡಿಕೆ (Adike Theft) ಪತ್ತೆಯಾಗಿದೆ. ಘಟನೆ ಸಂಬಂಧ ನಂಜಪ್ಪ ಅವರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
.jpeg)
LATEST NEWS
- ದುರಸ್ತಿ ವೇಳೆ ಲೈನ್ ಮ್ಯಾನ್ಗೆ ಕರೆಂಟ್ ಶಾಕ್, ಸ್ಥಳದಲ್ಲೆ ಸಾವು

- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

About The Editor
ನಿತಿನ್ ಆರ್.ಕೈದೊಟ್ಲು
















