SHIVAMOGGA LIVE NEWS | 23 FEBRURARY 2023
SHIMOGA : ಸೋಗನೆಯಲ್ಲಿನ ವಿಮಾನ ನಿಲ್ದಾಣಕ್ಕೆ ಇವತ್ತು ಇಂಡಿಯನ್ ಏರ್ ಫೋರ್ಸ್ನ (Airforce) ಎರಡನೆ ವಿಮಾನ ಆಗಮಿಸಿತ್ತು. ಬೆಳಗ್ಗೆ 11.30ರ ಹೊತ್ತಿಗೆ ವಿಮಾನವು ಶಿವಮೊಗ್ಗಕ್ಕೆ ಆಗಮಿಸಿತು.
ರಷ್ಯಾ ನಿರ್ಮಿತ ಇಲ್ಯೂಷಿನ್ 76 ಮಾದರಿಯ ವಿಮಾನ ಇದಾಗಿದೆ. ಭಾರತೀಯ ವಾಯು ಸೇನೆಯಲ್ಲಿ (Airforce) ಕ್ಯಾರಿಯರ್ ವಿಮಾನ. ಸೇನೆಗೆ ಅಗತ್ಯವಿರುವ ಸರಕು ಸಾಗಣೆಗೆ ಈ ವಿಮಾನ ಬಳಕೆಯಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?
ಮೊದಲ ಟ್ರಯಲ್ ರನ್ ಸಕ್ಸಸ್
ಫೆ.21ರಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಾಯು ಸೇನೆ ‘ಇಂಡಿಯಾ 1’ ವಿಮಾನ ಆಗಮಿಸಿತ್ತು. ದೆಹಲಿಯಿಂದ ಬಂದಿದ್ದ ‘ಇಂಡಿಯಾ 1’ ವಿಮಾನ ರನ್ ವೇ ಮೇಲೆ ವಿವಿಧ ಬಗೆಯ ಲ್ಯಾಂಡಿಂಗ್ ಪರೀಕ್ಷೆ ನಡೆಸಿತ್ತು. ಮೊದಲ ಟ್ರಯಲ್ ರನ್ ಯಶಸ್ವಿಯಾಗಿದೆ. ಇವತ್ತು ಎರಡನೇ ವಿಮಾನ ಬಂದಿಳಿದಿದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದು ಸಾಮಾನ್ಯ ವಿಮಾನವಲ್ಲ, ‘ಇಂಡಿಯಾ 1’, ಇದರ ವಿಶೇಷತೆ ಏನು ಗೊತ್ತಾ?