ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಶ್ರೀರಾಂಪುರದ ಗುಡ್ಡದ ಹರಕೆರೆ ಗ್ರಾಮದಲ್ಲಿರುವ ಏರ್‌ಟೆಲ್ ಟವರ್‌ನ (Airtel tower) ಬೆಲೆಬಾಳುವ ಜನರೇಟರ್ ಡಿ.ಜಿ ಆಲ್ಟರ್ ನೇಟರ್ ಅನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸುಮಾರು ₹70,000 ರೂಪಾಯಿ ಮೌಲ್ಯದ ಈ ಉಪಕರಣ ಕಳುವಾಗಿದೆ ಎಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?
ದಾವಣಗೆರೆಯ ತೇಜಾ ಟೆಕ್ನಿಕಲ್ ಸರ್ವಿಸಸ್‌ನಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗ ಕುಮಾರ್ ದೂರು ನೀಡಿದ್ದಾರೆ. ಸಾಗರ ರಸ್ತೆಯ ಪೆಸಿಟ್ ಕಾಲೇಜ್ ಎದುರಿಗಿರುವ ಏರ್‌ಟೆಲ್ ಟವರ್‌ಗೆ ಸೂಪರ್ ವೈಸರ್ ವಿನಯ್ ಭೇಟಿ ನೀಡಿದ್ದಾಗ ಜನರೇಟರ್ ಸುಸ್ಥಿತಿಯಲ್ಲಿತ್ತು. ಸ್ವಲ್ಪ ದಿನದ ಬಳಿಕ ಟೆಕ್ನಿಷಿಯನ್ ಶಿವಮೂರ್ತಪ್ಪ ಅವರು ಕೆಲಸಕ್ಕೆ ಹೋದಾಗ ಜನರೇಟರ್‌ನ ಆಲ್ಟರ್ ನೇಟರ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಷಯ ತಿಳಿದು ನಾಗಕುಮಾರ್ ಅವರು ತಮ್ಮ ಕಂಪನಿಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ದೂರು ನೀಡಿದ್ದಾರೆ.

LATEST NEWS
- ಶಿವಮೊಗ್ಗದಲ್ಲಿ ಏರ್‌ಟೆಲ್ ಮೊಬೈಲ್ ಟವರ್‌ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

- ಸಿದ್ಲೀಪುರದಲ್ಲಿ ವೈಭವದ ಬ್ರಹ್ಮರಥೋತ್ಸವ, ಏನೇನೆಲ್ಲ ಪೂಜೆಗಳು ನೆರವೇರಿದವು?

- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

About The Editor
ನಿತಿನ್ ಆರ್.ಕೈದೊಟ್ಲು






