ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಆಯನೂರು ಸಮೀಪ ರಾತ್ರಿ ವೇಳೆ ಗ್ರಾಮ ತೊರೆದು, ವಿಶೇಷ ಪೂಜೆ ಸಲ್ಲಿಸುವ ಆಚರಣೆ ನಡೆಯಿತು. ಬಂಜಾರ ಸಮುದಾಯದವರು ಒಂದೆಡೆ ಸೇರಿ ಈ ವಿಶೇಷ ಆಚರಣೆ ಮಾಡಿದರು.
ಆಯನೂರು ಸಮೀಪದ ಕೋಟೆ ತಾಂಡದವರು ಊರ ಹೊರಗೆ ಈ ಸಂಪ್ರದಾಯ ನೆರವೇರಿಸಿದರು. ಊರಿನ ಹೊರಗೆ ಗದ್ದೆ ಬಯಲಿನಲ್ಲಿ ಅಡುಗೆ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡಿದರು. ಮಂಗಳವಾರ ರಾತ್ರಿ ಈ ವಿಶೇಷ ಆಚರಣೆ ನೆರವೇರಿಸಿದರು.
ಸೂರ್ಯ ಮುಳುಗುತ್ತಿದ್ದಂತೆ ಊರು ಬಿಡ್ತಾರೆ
ಸೂರ್ಯ ಮುಳುಗುತ್ತಿದ್ದಂತೆ ಕೋಟೆ ತಾಂಡದ ಜನರು ಊರು ಬಿಡ್ತಾರೆ. ಗದ್ದೆ ಬಯಲಿನಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಒಲೆ ಸಿದ್ದಪಡಿಸುತ್ತಾರೆ. ಆ ಒಲೆಯಲ್ಲೇ ಮಾಂಸಹಾರದ ಅಡುಗೆ ಸಿದ್ದಪಡಿಸುತ್ತಾರೆ.
ಇದನ್ನೂ ಓದಿ | ಊರಿಗೂರೆ ಖಾಲಿ, ಗ್ರಾಮದ ಸುತ್ತಲು ಬೇಲಿ, ಇಡೀ ದಿನ ಯಾರೂ ಇಲ್ಲಿ ಕಾಲಿಡುವಂತಿಲ್ಲ, ಏನಿದು? ಯಾಕಿಂಗೆ?
ಏಳು ದೇವರಿಗೆ ಪೂಜೆ
ಎಲ್ಲರು ಒಗ್ಗೂಡಿ ಗ್ರಾಮದ ಏಳು ದೇವರ ಮಣ್ಣಿನ ಮೂರ್ತಿಗಳನ್ನು ಸಿದ್ದಪಡಿಸಿ, ಅವುಗಳಿಗೆ ಪೂಜೆ ಸಲ್ಲಿಸಿದರು. ಸಿದ್ಧಪಡಿಸಿದ ಅಡುಗೆಯನ್ನು ದೇವರಿಗೆ ಎಡೆ ಇಟ್ಟು, ನೈವೇದ್ಯ ಅರ್ಪಿಸಿ, ಒಟ್ಟಿಗೆ ಊಟ ಮಾಡುತ್ತಾರೆ. ಆ ಬಳಿಕ ದೇವರನ್ನು ಗಡಿ ದಾಟಿಸಿ ಮನೆಗೆ ಮರಳುತ್ತಾರೆ. ದೇವರು ಗಡಿ ದಾಟುವ ತನಕ ಯಾರೊಬ್ಬರು ಗ್ರಾಮ ಪ್ರವೇಶಿಸಬಾರದು ಎಂಬ ನಂಬಿಕೆ ಇದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]