ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 28 APRIL 2023
SHIMOGA : ರಸ್ತೆ ದಾಟುತ್ತಿದ್ದಾಗ ಬೊಲೇರೋ ಪಿಕಪ್ ವಾಹನ ಡಿಕ್ಕಿಯಾಗಿ ಬಾಲಕಿ (Girl) ತಲೆ, ಕಾಲಿಗೆ ಗಾಯವಾಗಿದೆ. ಬಾಲಕಿಯನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.

ಹೊನ್ನವಿಲೆಯ ಭೂಮಿಕಾ (6) ಗಾಯಗೊಂಡಿದ್ದಾಳೆ. ಸಂಬಂಧಿ ಮಂಜುಳಾ ಅವರ ಜೊತೆ ಭೂಮಿಕಾ ಊರಿನ ಚಾನಲ್ ಬಳಿ ಹೋಗಿ ಹಿಂತಿರುಗುತ್ತಿದ್ದಳು. ರಸ್ತೆ ದಾಟುವಾಗ ಜಯಂತಿ ಗ್ರಾಮದ ಕಡೆಯಿಂದ ವೇಗವಾಗಿ ಬಂದ ಬೊಲೇರೋ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಭೂಮಿಕಾಳ ತಲೆ, ಕಾಲಿಗೆ ಪೆಟ್ಟಾಗಿದೆ. ಕೂಡಲೆ ಆಕೆಯನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸಿಗಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಪಲ್ಟಿ, ಅಪಘಾತಕ್ಕೆ ಕಾರಣವೇನು?







