ವಿದ್ಯುತ್ ತಂತಿಗೆ ತಾಗುತ್ತದೆ ಅಂತಾ ರೆಂಬೆಗಳನ್ನು ಕಡಿದವರ ವಿರುದ್ಧ ಕೇಸ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021

ಅನುಮತಿ ಪಡೆಯದೆ ಮರಗಳ ಕಡಿತಲೆ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕಡಿದ ಮರಗಳು ಮತ್ತು ಟ್ರಾಕ್ಟರನ್ನು ವಶಪಡಿಸಿಕೊಳ್ಳಲಾಗಿದೆ.

ಉಂಬ್ಳೇಬೈಲು – ಕೈದೊಟ್ಲು ಗ್ರಾಮಗಳ ನಡುವೆ ಘಟನೆ ಸಂಭವಿಸಿದೆ. ಮರ ಕಡಿಯುತ್ತಿರುವ ಕುರಿತು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅನುಮತಿ ಪಡೆಯದೆ ಮರ ಕಡಿಯುತ್ತಿರುವುದು ಬೆಳಕಿಗೆ ಬಂದಿದೆ.

ನಿರಂತರ ಜ್ಯೋತಿ ವಿದ್ಯುತ್ ಮಾರ್ಗಕ್ಕೆ ಕಡಿತಲೆ

ನಿರಂತರ ಜ್ಯೋತಿ ವಿದ್ಯುತ್ ಮಾರ್ಗ ಅಳವಡಿಕೆಯ ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆ ಈ ಕಡಿತಲೆ ಮಾಡಿಸುತ್ತಿತ್ತು. ಸಂಸ್ಥೆಯು ಈಗಾಗಲೇ ನೂತನ ವಿದ್ಯುತ್ ಮಾರ್ಗವನ್ನು ಎಳೆದಿತ್ತು. ಅದಕ್ಕೆ ತಾಗುತ್ತಿದ್ದ ಮರಗಳನ್ನು ಕಡಿತಲೆ ಮಾಡಲಾಗುತ್ತಿತ್ತು.

ಮರಗಳನ್ನು ಕಡಿತಲೆ ಮಾಡುತ್ತಿದ್ದ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಕಾರ್ಮಿಕರು ಸಮರ್ಪಕ ಉತ್ತರ ನೀಡಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಈ ವೇಳೆ ಅನುಮತಿ ಇಲ್ಲದಿರುವುದು ಬೆಳಕಿಗೆ ಬಂದಿದೆ.

NH nephrolody%2Bad %2Bkannada 10

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment