
ಶಿವಮೊಗ್ಗ ಲೈವ್.ಕಾಂ | SHIMOGA | 5 ಮೇ 2020
ದಾವಣಗೆರೆಯಲ್ಲಿ ಕರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಶಿವಮೊಗ್ಗದ ಗಡಿ ಭಾಗಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ದಾವಣಗೆರೆ ಕಡೆಯಿಂದ ಬರುವ ವಾಹನಗಳನ್ನು ಯಾವುದೆ ಕಾರಣಕ್ಕೂ ಜಿಲ್ಲೆಯೊಳಗೆ ಪ್ರವೇಶ ನೀಡದಂತೆ ಕಠಿಣ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಅವರು ಇವತ್ತು ಶಿವಮೊಗ್ಗದ ಗಡಿ ಭಾಗದಲ್ಲಿರುವ ಚೆಕ್ಪೋಸ್ಟ್ಗೆ ದಿಢೀರ್ ಭೇಟಿ ನೀಡಿದ್ದರು. ಸುತ್ತುಕೋಟೆ ಚೆಕ್ಪೋಸ್ಟ್ಗೆ ತೆರಳಿದ್ದ ಅಧಿಕಾರಿಗಳು, ಯಾವ ವಾಹನವನ್ನೂ ಜಿಲ್ಲೆಯೊಳಗೆ ಬಿಡದಂತೆ ಸೂಚಿಸಿದ್ದಾರೆ.

ಪಾಸ್ ಇದ್ದರಷ್ಟೇ ಜಿಲ್ಲೆಯೊಳಗೆ ಎಂಟ್ರಿ
ಇನ್ನು, ದಾವಣಗೆರೆ ಕಡೆಯಿಂದ ಬರುವ ವಾಹನಗಳ ಪರಿಶೀಲನೆ ನಡೆಸಬೇಕು. ಪಾಸ್ ಇರುವ ವಾಹನಗಳ ಸಂಪೂರ್ಣ ಪರಿಶೀಲನೆ ಬಳಿಕವಷ್ಟೆ ಜಿಲ್ಲೆಯೊಳಗೆ ಬರಲು ಅವಕಾಶ ನೀಡಬೇಕು ಎಂದು ಸುತ್ತುಕೋಟೆ ಚೆಕ್ಪೋಸ್ಟ್ನಲ್ಲಿರುವ ಪೊಲೀಸರಿಗೆ ಸೂಚಿಸಿದ್ದಾರೆ.


ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]