ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 13 AUGUST 2024 : ವಿಶ್ವ ಆನೆ ದಿನಾಚರಣೆ ಶುಭ ಸಂದರ್ಭದಲ್ಲಿ ಶಿವಮೊಗ್ಗ ಸಕ್ರೇಬೈಲು ಆನೆ ಬಿಡಾರದಲ್ಲಿ (Camp) ಸಲಗವೊಂದಕ್ಕೆ ಶಾಸ್ರೋಕ್ತವಾಗಿ ನಾಮಕರಣ ಮಾಡಲಾಯಿತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
2023ನೇ ನವೆಂಬರ್ 16ರಂದು ಮೂಡಿಗೆರೆ ತಾಲೂಕು ಆಲ್ಲೂರು ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಕಾಡಾನೆಯನ್ನು ಶಿಬಿರದಲ್ಲಿ ಪಳಗಿಸಲಾಗಿತ್ತು. ಅಲ್ಪಾವಧಿಯಲ್ಲೆ ಈ ಸಲಗ ಶಿಬಿರದ ಮೆಚ್ಚಿನ ಊರಾನೆಯಾಗಿ ಬದಲಾಗಿದೆ. ಮಾವುತರು ಮತ್ತು ಕಾವಾಡಿಗಳಿಗೆ ವಿಧೇಯನಾಗಿದ್ದ ಸಲಗಕ್ಕೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿ ಕಾರಿಗಳು ‘ಅಶ್ವತ್ಥಾಮ’ ಹೆಸರಿಟ್ಟರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಅಗ್ನಿವೀರರ ನೇಮಕಾತಿ ರ್ಯಾಲಿ, ಯಾವೆಲ್ಲ ಜಿಲ್ಲೆಯವರಿಗೆ ಇರಲಿದೆ ಅವಕಾಶ?
ಸೋಮವಾರ ಬೆಳಗ್ಗೆ ಬಿಡಾರದಲ್ಲಿ ಪುರೋಹಿತ ಮಧು ಭಟ್ ಮಂತ್ರ ಘೋಷಣೆ ಮಾಡಿದರೆ, ವನ್ಯ ಜೀವಿ ವಿಭಾಗದ ಡಿಎಫ್ಒ ಪ್ರಸನ್ನಕೃಷ್ಣ ಪಟಗಾರ್ ಅವರು ಸಲಗದ ಕಿವಿಯಲ್ಲಿ ಮೂರು ಬಾರಿ ಅಶ್ವತ್ಥಾಮ ಎಂದು ಕೂಗುವ ಮೂಲಕ ನಾಮಕರಣ ಮಾಡಿದರು. ಬಿಡಾರದಲ್ಲಿ ಈಗ ಮೂರು ಮರಿ ಸೇರಿ 23 ಆನೆಗಳಿವೆ.
ಇದನ್ನೂ ಓದಿ ⇒ ಪುರದಾಳು ರಸ್ತೆಯಲ್ಲಿ ಅಪಘಾತ, ಮಹಿಳೆಯ ಎರಡು ಕಾಲಿನ ಮೂಳೆ ಕಟ್ – ಇಲ್ಲಿದೆ 3 ಫಟಾಫಟ್ ನ್ಯೂಸ್