ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | HOLEHONNUR NEWS | 4 ಡಿಸೆಂಬರ್ 2021
ವ್ಯಕ್ತಿಯೊಬ್ಬ ತಾನು ಸಾಕಿರುವ ನಾಲ್ಕು ಹಸುಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹಸುಗಳು ಹಾಲು ಕೊಡುತ್ತಿಲ್ಲ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಕಂಪ್ಲೇಂಟ್ ಕಾಪಿ ಸ್ವೀಕರಿಸಿದ ಪೊಲೀಸರು, ಆತನಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ.
ಹೊಳೆಹೊನ್ನೂರು ಸಮೀಪದ ಗ್ರಾಮವೊಂದರ ರೈತ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವಿಚಿತ್ರ ದೂರು ದಾಖಲಿಸಿದ್ದಾರೆ. ತಮ್ಮ ಮನೆಯ ಕೊಟ್ಟಿಗೆಯಲ್ಲಿರುವ ನಾಲ್ಕು ಹಸುಗಳ ವಿರುದ್ಧವೇ ಪ್ರಕರಣ ದಾಖಲಿಸಲು ಮುಂದಾಗಿದ್ದಾನೆ.
ಹಸುಗಳ ವಿರುದ್ಧ ಪ್ರಕರಣವೇಕೆ?
ಹೊಳೆಹೊನ್ನೂರು ಸಮೀಪದ ಗ್ರಾಮವೊಂದರ ರೈತ ತನ್ನ ಹಸುಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ. ತಾನು ಸಾಕಿದ್ದ ನಾಲ್ಕು ಹಸುಗಳನ್ನು ದಿನ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೂ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆವರೆಗೂ ತುಂಬಾ ಚೆನ್ನಾಗಿ ಮೇಯಿಸಿಕೊಂಡು ಬರುತ್ತಿದ್ದೇನೆ. ಆದರೆ ಕಳೆದ 4 – 5 ದಿನಗಳಿಂದ ಹಾಲನ್ನು ಕರೆಯಲು ಹೋದರೆ ಆ ಹಸುಗಳು ಹಾಲು ಕೊಡದೆ ಸುಖಸುಮ್ಮನೆ ಕಾಲಿಂದ ಜಾಡಿಸಿ ಒದೆಯುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಹಸುಗಳು ತನಗೆ ಹಾಗೂ ತನ್ನ ಪತ್ನಿಗೆ ಸರಿಯಾಗಿ ಹಾಲು ಕೊಡುತ್ತಿಲ್ಲ. ಅವುಗಳನ್ನು ಠಾಣೆಗೆ ಕರೆಯಿಸಿ ತಾವಾಗಿಯೇ ಸರಿಯಾಗಿ ಹಾಲು ಕೊಡುಂತೆ ಮಾಡಿ ನ್ಯಾಯ ಒದಗಿಸಿ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೊಂದಲಕ್ಕೀಡಾದ ಪೊಲೀಸರು
ಹಸುಗಳನ್ನು ಠಾಣೆಗೆ ಕರೆಯಿಸಬೇಕು ಎಂದು ರೈತ ಪಟ್ಟು ಹಿಡಿದಿದ್ದ. ಇದರಿಂದ ಪೊಲೀಸರು ಕೆಲಕಾಲ ಗೊಂದಲಕ್ಕೀಡಾದರು. ರೈತನ ದೂರು ಸ್ವೀಕರಿಸಿದ ಪೊಲೀಸರು, ರೈತನಿಗೆ ತಿಳಿ ಹೇಳಿ ಕಳುಹಿಸಿದ್ದಾರೆ.

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






