SHIVAMOGGA LIVE NEWS | PROTEST | 27 ಮೇ 2022
ತಮ್ಮ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಮತ್ತು ವಿನಾಕಾರಣ ದಾಖಲೆಗಳಿಗಾಗಿ ಅಲೆಸುವುದನ್ನು ಖಂಡಿಸಿ ಡಣಾಯಕಪುರ ಗ್ರಾಮಸ್ಥರು, ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳ ವಿಳಂಬ ನೀತಿಯನ್ನು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆರೋಪಗಳೇನು? ಆಗ್ರಹವೇನು?
ಇ-ಸ್ವತ್ತು, ಎನ್ಒಸಿ, ಖಾತೆ ಬದಲಾವಣೆ, ಲೈಸೆನ್ಸ್ ಒದಗಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಿಕೊಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಅದರಲ್ಲೂ ಪಟ್ಟಣ ಪಂಚಾಯಿತಿ ಎಂದು ಮೇಲ್ದರ್ಜೆಗೇರಿಸಿದ ಬಳಿಕ ಡಣಾಯಕಪುರ, ಎಮ್ಮೆಹಟ್ಟಿ, ಹೊಳೆಬೈರನಹಳ್ಳಿ, ಜಂಬರಘಟ್ಟ, ಕೆರೆಬೀಸನಹಳ್ಳಿ ಗ್ರಾಮಗಳ ಜನರಿಗೆ ದಾಖಲೆಗಳನ್ನು ಒದಗಿಸಲು ತುಂಬಾ ವಿಳಂಬ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ವಿನಾಕಾರಣ ದಾಖಲೆಗಳಿಗಾಗಿ ಅಲೆದಾಡಿಸಲಾಗುತ್ತಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮೆಲ್ಲ ಕೆಲಸ ಬಿಟ್ಟು ಪಟ್ಟಣ ಪಂಚಾಯಿತಿ ಕಚೇರಿ ಸುತ್ತುವ ಕೆಲಸವಾಗಿದೆ ಎಂದು ರೈತರು ಆರೋಪಿಸಿದರು.
ನಿರ್ಲಕ್ಷ ಮತ್ತು ವಿಳಂಬ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ.ವೀರೇಶ್, ತಾಲೂಕು ಅಧ್ಯಕ್ಷ ಹಿರಣ್ಣಯ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಇದನ್ನೂ ಓದಿ – ಭದ್ರಾವತಿ ಪೊಲೀಸರ ದಾಳಿ, 9 ನಾಡ ಬಂದೂಕು ವಶಕ್ಕೆ, ಒಬ್ಬ ಅರೆಸ್ಟ್
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.