ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಆಗಸ್ಟ್ 2019
ಪರಿಶೀಲನೆ ಹಂತದಲ್ಲಿದ್ದ ಕಡತವನ್ನು ತಹಶೀಲ್ದಾರ್ ಕಚೇರಿಯಿಂದ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ರೈತರೊಬ್ಬರ ವಿರುದ್ಧ ದೂರು ತಾಲೂಕು ಕಚೇರಿ ಶಿರಸ್ತೇದಾರ್ ದೂರು ನೀಡಿದ್ದಾರೆ. ಫೈಲ್ ಕದ್ದೊಯ್ಯುತ್ತಿರುವುದು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪರಿಶೀಲನೆ ಹಂತದಲ್ಲಿದ್ದ ಕಡತವನ್ನು, ದೇವೇಂದ್ರಪ್ಪ ಎಂಬುವವರು ಅಧಿಕಾರಿಗಳ ಗಮನಕ್ಕೆ ಬಾರದ ಹಾಗೆ, ತೆಗೆದುಕೊಂಡು ಹೋಗಿದ್ದಾರೆ. ದೇವೇಂದ್ರಪ್ಪ ಫೈಲ್ ಕೊಂಡೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಪರಿಶೀಲಿಸಿದ ಬಳಿಕ, ದೇವೇಂದ್ರಪ್ಪ ವಿರುದ್ಧ ಶಿರಸ್ತೇದಾರ್ ಕೃಷ್ಣಮೂರ್ತಿ ಅವರು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏನದು ಫೈಲ್, ಅದನ್ನು ಕೊಂಡೊಯ್ದಿದ್ದೇಕೆ?
ಹೊಳಲೂರಿನ ಬೆಳಲಕಟ್ಟೆ ಗ್ರಾಮದ ಜಮೀನೊಂದನ್ನು ಪಾರ್ವತಮ್ಮ ಎಂಬುವವರ ಹೆಸರಿಗೆ ಪಹಣಿ ನಮೂದಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಹೆಚ್ಚುವರಿ ದಾಖಲೆ ಹಾಜರುಪಡಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಪರಿಶೀಲನೆ ಹಂತದಲ್ಲಿದ್ದ ಕಡತವನ್ನು ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಟೇಬಲ್ ಮೇಲೆ ಇರಿಸಿದ್ದರು.
ಶಿರಸ್ತೇದಾರ್ ಅವರು ಯಾರು ಇಲ್ಲದ ವೇಳೆ ಕಚೇರಿಗೆ ಬಂದ ದೇವೇಂದ್ರಪ್ಪ ಅವರು ಫೈಲ್ ಕದ್ದೊಯ್ದಿದ್ದಾರೆ. ಅದರಲ್ಲಿದ್ದ ಕೆಲವು ದಾಖಲೆಗಳನ್ನು ತೆಗೆದುಕೊಂಡು, ಉಳಿದ ದಾಖಲೆಗಳ ಫೈಲನ್ನು ಜಿಲ್ಲಾಧಿಕಾರಿ ಕಚೇರಿಗೆ ಹಾಜರುಪಡಿಸಿದ್ದಾರೆ. ಈ ಮೂಲಕ ಸರ್ಕಾರಿ ಕೆಲಸಕ್ಕೆ ತೊಂದರೆ ಮಾಡಿರುವ ಆರೋಪದ ಮೇಲೆ ದೇವೇಂದ್ರಪ್ಪ ಅವರ ವಿರುದ್ಧ ದೂರು ನೀಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]