ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
KUMSI : ಒಂದೇ ಜಮೀನಿನಲ್ಲಿ ಎರಡು ಬಾರಿ ಶುಂಠಿ ಕಳ್ಳತನವಾಗಿದೆ. ಬೆಳೆಗಾರ ಇಲ್ಲದ ಸಂದರ್ಭ ಗಮನಿಸಿ 9 ಕ್ವಿಂಟಾಲ್ ಶುಂಠಿ ಕಳವು ಮಾಡಿರುವ ಶಂಕೆ ಇದೆ ಎಂದು ಆರೋಪಿಸಲಾಗಿದೆ. ಹಿಟ್ಟಗೊಂಡನಕೊಪ್ಪ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕುಂಸಿಯ ದೇವೇಂದ್ರ ಎಂಬುವವರು ಶುಂಠಿ ಬೆಳೆದಿದ್ದರು. ನಿತ್ಯ ಜಮೀನಿಗೆ ಹೋಗಿ ಬರುತ್ತಿದ್ದರು.
ಏಪ್ರಿಲ್ 29ರ ರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು 7 ಕ್ವಿಂಟಾಲ್ ಶುಂಠಿ ಕಳವು ಮಾಡಲಾಗಿತ್ತು. ಈ ಹಿನ್ನೆಲೆ ರಾತ್ರಿ ವೇಳೆ ಜಮೀನಿನಲ್ಲಿ ದೇವೇಂದ್ರ ಕಾವಲು ಕಾಯಲು ಆರಂಭಿಸಿದರು. ಮೇ 4ರಂದು ಮದುವೆ ಸಮಾರಂಭಕ್ಕೆ ದೇವೇಂದ್ರ ತೆರಳಿದ್ದರು. ಆ ರಾತ್ರಿ ನಾಲ್ಕು ಚೀಲ ಶುಂಠಿ ಕಳುವಾಗಿತ್ತು. ಬೆಳೆಗಾರ ಇಲ್ಲದ ಸಂದರ್ಭವನ್ನೆ ಗಮನಿಸಿ 92 ಸಾವಿರ ರೂ. ಮೌಲ್ಯದ ಶುಂಠಿ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಆಗುಂಬೆ ಬಳಿ ಅಪಘಾತ, ಒಬ್ಬ ಸಾವು, ಕ್ಯಾಂಟರ್ ಜಖಂ