ಶಿವಮೊಗ್ಗದಲ್ಲಿ ಹುಲಿ ದತ್ತು ಪಡೆದ ಸರ್ಕಾರಿ ನೌಕರರ ಸಂಘ, ದತ್ತು ಪಡೆಯೋದು ಹೇಗೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 6 FEBRUARY 2023

SHIMOGA : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಸರ್ಕಾರಿ ನೌಕರರ (Government Employees) ಸಂಘದ ವತಿಯಿಂದ ಹುಲಿಯೊಂದನ್ನು ದತ್ತು ಪಡೆಯಲಾಗಿದೆ. ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪದಾಧಿಕಾರಿಗಳು ಹುಲಿ ಮತ್ತು ಸಿಂಹಧಾಮಕ್ಕೆ ಭೇಟಿ ನೀಡಿ, ದತ್ತು ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿದರು.

Government-Employees-Adopt-Tiger-in-tyavarekoppa

ಒಂದು ವರ್ಷದ ಅವಧಿಗೆ ಹುಲಿಯೊಂದನ್ನು ದತ್ತು ಪಡೆಯಲಾಗಿದೆ. ಇದಕ್ಕಾಗಿ 2 ಲಕ್ಷ ರೂ. ಪಾವತಿಸಲಾಗಿದೆ. ಈ ಹಿಂದೆ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಒಂದು ಚಿರತೆಯನ್ನು ದತ್ತು ಪಡೆಯಲಾಗಿತ್ತು ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.

ದತ್ತು ಪಡೆಯೋದು ಹೇಗೆ?

ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಾಣಿಗಳ ದುತ್ತು ಪಡೆಯುವ ವಿವಿಧ ಯೋಜನೆಗಳಿವೆ. ಹುಟ್ಟುಹಬ್ಬ ಅಥವಾ ಇತರೆ ಸ್ಮರಣೀಯ ದಿನಗಳಂದು ಸಾರ್ವಜನಿಕರು ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಪ್ರಾಣಿಗಳ ಒಂದು ದಿನದ ಆಹಾರ ವ್ಯವಸ್ಥೆ ಮಾಡುವುದು, ಡೊನೇಷನ್ ನೀಡುವ ವಿವಿಧ ಯೋಜನೆಗಳಿವೆ. ಆಸಕ್ತರು ಹುಲಿ ಮತ್ತು ಸಿಂಹಧಾಮದಲ್ಲಿಯೇ ಇರುವ ಆಡಳಿತ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು. (Government Employees) 

ಇದನ್ನೂ ಓದಿ – ವಾಹನ ಡಿಕ್ಕಿಯಾಗಿ ಬಿದ್ದು ನರಳಾಡುತ್ತಿದ್ದ ಜಿಂಕೆಗೆ ನೆರವಾದ ಜನ, ಫೋಟೊಗಳು VIRAL

Leave a Comment