ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JANUARY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹೊಳೆಹೊನ್ನೂರು : ಇಲ್ಲಿನ ಸಿದ್ಲಿಪುರ ಗ್ರಾಮದಲ್ಲಿ ಸರ್ಕಾರಿ ಬಸ್ (government bus) ಸೇವೆಗೆ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಚಾಲನೆ ನೀಡಿದರು. ಇದೆ ವೇಳೆ ಮಾತನಾಡಿದ ಅವರು, ಕೊರೋನ ಲಾಕ್ ಡೌನ್ ಹಿನ್ನೆಲೆ ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಬಸ್ ಸಂಚಾರ ಪುನಾರಂಭಗೊಳ್ಳಲಿಲ್ಲ ಎಂದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಬಸ್ ಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳುವುದು ಕಷ್ಟವಾಗುತ್ತಿದೆ. ಸಾರ್ವಜನಿಕರು ಪರದಾಡುವಂತಾಗಿದೆ. ಇದೆ ಕಾರಣಕ್ಕೆ ಎಲ್ಲೆಲ್ಲಿ ಬಸ್ ಸೇವೆ ಇಲ್ಲವೊ ಆ ಊರುಗಳಿಗೆ ಸರ್ಕಾರಿ ಬಸ್ (government bus) ಬಿಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ – ದುರ್ಗಿಗುಡಿಯಲ್ಲಿ ಕಾರಿನಲ್ಲಿದ್ದ ಮೊಬೈಲ್ ಸ್ಪೋಟ, ಚಾಲಕನ ಸೀಟಿಗೆ ಬೆಂಕಿ
ಸಾರಿಗೆ ಸಂಸ್ಥೆಯ ಸಹಾಯಕ ಸಂಚಾರ ಅಧೀಕ್ಷಕ ಡಿ.ಸಿ.ರೇಣುಕಾನಂದ, ಬಸ್ ಚಾಲಕ ಹೆಚ್.ಬಿ.ಸಿದ್ದೇಶ್, ನಿರ್ವಾಹಕ ಕೆ.ಮಲ್ಲೇಶ್, ಬಿಜೆಪಿ ಮುಖಂಡ ಎಸ್.ಶ್ರೀನಿವಾಸ್, ಪರಮೇಶ್ವರಪ್ಪ ಗೌಡ, ಎಂ.ಮಲ್ಲೇಶಪ್ಪ, ಜಿ.ಎನ್.ರಂಗಪ್ಪ, ನಾಗರತ್ನ, ಕಲ್ಪನಾ ಸೇರಿದಂತೆ ಹಲವರು ಇದ್ದರು.