SHIVAMOGGA LIVE NEWS | 21 FEBRURARY 2023
SHIMOGA : ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದ ವಾಯು ಸೇನೆ ವಿಮಾನಕ್ಕೆ ಇಂಡಿಯಾ 1 ಅನ್ನುವ ಹೆಸರಿದೆ. ಇದು ದೇಶದ ಅತ್ಯಂತ ಪ್ರತಿಷ್ಠಿತ ವಿಮಾನಗಳಲ್ಲಿ ಒಂದು. ಅತ್ಯಂತ ಹೈಟೆಕ್ ಸೌಲಭ್ಯವು ಇದರಲ್ಲಿದೆ. ರಾಷ್ಟ್ರಪತಿ ಮತ್ತು ಪ್ರಧಾನಿ ಮಾತ್ರ ಈ ವಿಮಾನದ (INDIA 1) ಬಳಕೆ ಮಾಡಲಿದ್ದಾರೆ.
ವಿಮಾನದ ಬಗ್ಗೆ 5 ಪ್ರಮುಖಾಂಶ
POINT 1 : ಬೋಯಿಂಗ್ 737 ವಿಮಾನವನ್ನು ವಾಯು ಸೇನೆ ನಿರ್ವಹಣೆ ಮಾಡುತ್ತಿದೆ. ಇದರ ಪೈಲೆಟ್ ಗಳು ವಾಯು ಸೇನೆಯಲ್ಲಿ ಅತ್ಯಂತ ಕಠಿಣ ತರಬೇತಿ ಪಡೆದಿರುತ್ತಾರೆ. ಸುದೀರ್ಘ ಅವಧಿಯ ವಿಮಾನ ಹಾರಾಟ ಅನುಭವ ಹೊಂದಿರುತ್ತಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮೊಟ್ಟಮೊದಲ ವಿಮಾನ
POINT 2 : ರಾಷ್ಟ್ರಪತಿ ಮತ್ತು ಪ್ರಧಾನಿ ಅವರು ವಿದೇಶ ಪ್ರವಾಸಕ್ಕೆ ತೆರಳಲು ಏರ್ ಇಂಡಿಯಾ 1 ಎಂಬ ಅತ್ಯಾಧುನಿಕ ವಿಮಾನಗಳಿವೆ. ಭಾರತದ ಒಳಗೆ ಪ್ರವಾಸಕ್ಕೆ ಬೋಯಿಂಗ್ 737 ವಿಮಾನಗಳನ್ನು ಬಳಕೆ ಮಾಡುತ್ತಾರೆ. ಇವತ್ತು ಶಿವಮೊಗ್ಗಕ್ಕೆ ಬಂದಿದ್ದು ಇದೆ ವಿಮಾನ. ರಾಷ್ಟ್ರಪತಿ, ಪ್ರಧಾನಿ ಅವರು ವಿಮಾನದೊಳಗೆ ಕಾಲಿಟ್ಟ ತಕ್ಷಣ ಈ ವಿಮಾನಕ್ಕೆ ಇಂಡಿಯಾ 1 (INDIA 1) ಎಂಬ ಕೋಡ್ ನೇಮ್ ನಿಂದ ಕರೆಯಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?
POINT 3 : ಇಂಡಿಯಾ 1 ವಿಮಾನದ ಕುರಿತು ಯಾವುದೆ ಮಾಹಿತಿ, ಅದರ ಹಾರಾಟದ ಯಾವುದೆ ವಿವರಗಳು ಸೋರಿಕೆಯಾಗದಂತೆ ಹೆಚ್ಚ ನಿಗಾ ವಹಿಸಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗ ರನ್ ವೇ ಪರೀಕ್ಷಿಸಿದ ವಿಮಾನ, ದೆಹಲಿಯತ್ತ ಪಯಣ, ಹೇಗೆಲ್ಲ ಪರೀಕ್ಷೆ ನಡೆಯಿತು? | VIDEO
POINT 4 : ಶಿವಮೊಗ್ಗಕ್ಕೆ ಇವತ್ತು ಆಗಮಿಸಿದ್ದ ವಿಮಾನಕ್ಕೆ ವಾಯುಸೇನೆಯು ರಾಜ್ ದೂತ್ ಎಂಬ ಕೋಡ್ ನೇಮ್ ಇಟ್ಟಿದೆ. 16 ವರ್ಷದಿಂದ ಈ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.
POINT 5 : ಮೂರು ದಿನದ ಹಿಂದೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಇದೆ ವಿಮಾನದಲ್ಲಿ ಮದುರೈ, ಕೊಯಮತ್ತೂರು ಪ್ರವಾಸ ಕೈಗೊಂಡಿದ್ದರು.