ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 MAY 2023
SHIMOGA : ಚೋರಡಿಯಲ್ಲಿ ಖಾಸಗಿ ಬಸ್ಸುಗಳ ನಡುವೆ ಭೀಕರ ಅಪಘಾತ (Head On) ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕನ ಪರಿಚಿತ ಮತ್ತು ಗಾಯಾಳುವೊಬ್ಬರು ಘಟನೆ ಕುರಿತು ವಿವರಿಸಿದ್ದಾರೆ. ಬಸ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿದ್ದೆ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕ ಕಿಟ್ಟಿ ಘಟನೆಯ ಮಾಹಿತಿ ನೀಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಚೋರಡಿ ಅಪಘಾತ ಕೇಸ್, ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
ಕಿಟ್ಟಿ ಹೇಳಿದ್ದೇನು?
ʼನಾನು ಬೆಂಗಳೂರಿನಲ್ಲಿ ಬಸ್ ಚಾಲಕ. ವೋಟ್ ಹಾಕಲು ಬಂದಿದ್ದೆ. ಇವತ್ತು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೋಗಿ, ಅಲ್ಲಿಂದ ಬೆಂಗಳುರಿಗೆ ತೆರಳಬೇಕಿತ್ತು. ಕಾಳಪ್ಪ ಬಸ್ಸಿನ ಚಾಲಕ ಪರಿಚಯವಿದ್ದರಿಂದ ಆತನ ಪಕ್ಕದ ಸೀಟಿನಲ್ಲಿಯೇ ಕುಳಿತಿದ್ದೆ.ʼ
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ʼಶಿಕಾರಿಪುರದಿಂದ ಹೊರಟಾಗಲೆ ಸಂಜೆ 6 ಗಂಟೆಯಾಗಿತ್ತು. ಹಿತ್ಲಾ ಬರುವವರೆಗೆ ಬಸ್ಸು ನಿಧಾನಕ್ಕೆ ಹೋಗುತ್ತಿತ್ತು. ಅಲ್ಲಿಂದ ಚಾಲಕ ಅತಿ ವೇಗವಾಗಿ ಬಸ್ ಓಡಿಸಲು ಆರಂಭಿಸಿದ. ರಾತ್ರಿ 7 ಗಂಟೆಯೊಳಗೆ ಶಿವಮೊಗ್ಗ ತಲುಪಬೇಕು ಎಂದು ಚಲಾಯಿಸುತ್ತಿದ್ದ. ಮಧ್ಯೆ ಮಧ್ಯೆ ಮೊಬೈಲ್ನಲ್ಲಿಯು ಮಾತನಾಡುತ್ತಿದ್ದ. ಚೋರಡಿ ಸೇತುವೆ ಬಳಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆಸಿದ. ಎದುರಿನಿಂದ ಬರುತ್ತಿದ್ದ ಬಸ್ಸಿನದ್ದು ಯಾವುದೇ ತಪ್ಪಿಲ್ಲʼ ಎಂದು ಕಿಟ್ಟಿ ತಿಳಿಸಿದರು.