ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅವರ ಅಂತ್ಯ ಸಂಸ್ಕಾರ (Last Rites) ಕಳೆದ ರಾತ್ರಿ ಮತ್ತೂರು ಗ್ರಾಮದಲ್ಲಿ ನಡೆಯಿತು. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಬಿಜೆಪಿ ಧ್ವಜ ಹೊದಿಸಿ ಅಂತಿಮ ನಮನ
ಇದಕ್ಕೂ ಮೊದಲು ಎಂ.ಬಿ.ಭಾನುಪ್ರಕಾಶ್ ಅವರ ಪಾರ್ಥೀವ ಶರೀರಕ್ಕೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು. ವಿವಿಧೆಡೆಯಿಂದ ಅಗಮಿಸಿದ್ದ ಸಂಬಂಧಿಕರು, ಸ್ನೇಹಿತರು, ಕಾರ್ಯಕರ್ತರು, ಬೆಂಬಲಿಗರು ಭಾನುಪ್ರಕಾಶ್ ಅವರನ್ನು ನೆನೆದು ಕಂಬನಿ ಮಿಡಿದರು.
ಇದೇ ವೇಳೆ ಎಂ.ಬಿ.ಭಾನುಪ್ರಕಾಶ್ ಅವರ ಪಾರ್ಥೀವ ಶರೀರಕ್ಕೆ ಬಿಜೆಪಿ ಧ್ವಜನ್ನು ಹೊದಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಹರತಾಳು ಹಾಲಪ್ಪ, ಮುಖಂಡ ವಿನ್ಸಂಟ್ ರೋಡ್ರಿಗಸ್ ಸೇರಿದಂತೆ ಹಲವರು ಬಿಜೆಪಿ ಧ್ವಜ ಹೊದಿಸಿ ಗೌರವ ಸಲ್ಲಿಸಿದರು.
ಮತ್ತೂರಿನಲ್ಲಿ ಶ್ರದ್ಧಾಂಜಲಿ ಸಭೆ
ಎಂ.ಬಿ.ಭಾನಪ್ರಕಾಶ್ ಅವರ ನಿವಾಸದ ಬಳಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಹಲವರು ಭಾನುಪ್ರಕಾಶ್ ಅವರನ್ನು ಸ್ಮರಿಸಿಕೊಂಡರು.
ಬಿ.ವೈ.ರಾಘವೇಂದ್ರ, ಸಂಸದ : ಇಂದು ನಮ್ಮೆಲ್ಲರ ನಕ್ಷತ್ರ ದೂರವಾಗಿದೆ. ಇಷ್ಟು ಬೇಗ ಈ ದಿನವನ್ನು ನಿರೀಕ್ಷಿಸಿರಲಿಲ್ಲ. ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ನೀಡಿದವರು. ಸಂಘಟನೆಯಲ್ಲಿ ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಸರಿಪಡಿಸುತ್ತಿದ್ದ ನಾಯಕ. ಅವರ ಪ್ರೇರಣೆ, ಮಾರ್ಗದರ್ಶನ ಈ ಸಮಾಜಕ್ಕೆ ಇನ್ನಷ್ಟು ವರ್ಷ ಬೇಕಿತ್ತು. ಅವರ ಅಪೇಕ್ಷೆಗೆ ತಕ್ಕಂತೆ ನಾವು ನಡೆದರೆ ನಿಜವಾದ ಶ್ರದ್ಧಾಂಜಲಿ.
ಆರಗ ಜ್ಞಾನೇಂದ್ರ, ಶಾಸಕ : ಸಂಘಟನೆಯ ಬಹುದೊಡ್ಡ ನೇತಾರರಾಗಿ ಪಕ್ಷ ಕಟ್ಟಿದ, ತನ್ನ ಮಕ್ಕಳನ್ನು ಆರ್‌ಎಸ್‌ಎಸ್ ಪ್ರಚಾರಕರನ್ನಾಗಿ ಮಾಡಿದವರು ಭಾನುಪ್ರಕಾಶ್. ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಕೊರತೆ ಸದಾ ನಮ್ಮನ್ನು ಕಾಡುತ್ತದೆ. ಇನ್ನೊಬ್ಬ ಭಾನುಪ್ರಕಾಶ ಹುಟ್ಟಿ ಬರುತ್ತಾರೆಂಬ ವಿಶ್ವಾಸವಿಲ್ಲ.
ಇದನ್ನೂ ಓದಿ – ಬಂಗಾರಪ್ಪಗೆ ಎದುರಾಳಿಯಾಗಿದ್ದರು, ಗಾಜನೂರಿನಿಂದ ಗೆದ್ದಿದ್ದರು, ಭಾನುಪ್ರಕಾಶ್ ಕುರಿತು ಇಲ್ಲಿದೆ 5 ಪ್ರಮುಖಾಂಶ
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ : ದಲಿತ ಜನಾಂಗದ ಭಾಗ್ಯೋದಯವನ್ನು ನಿರ್ಮಿಸುತ ಹಾಡನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೇರೆಯವರಿಗೆ ಪ್ರೇರಣೆ ನೀಡಿದವರು ಭಾನುಪ್ರಕಾಶ. ವಿಧಾನ ಪರಿಷತ್‌ನಲ್ಲಿ ಸಂಸ್ಕೃತದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಎಲ್ಲರೂ ಸಂಸ್ಕೃತದ ಬಗ್ಗೆ ಅವಲೋಕಿಸುವಂತೆ ಮಾಡಿದ್ದರು.
ಪಟ್ಟಾಭಿರಾಮ್, ಆರ್‌ಎಸ್‌ಎಸ್ ಪ್ರಾಂತ ಸಹ ಕಾರ್ಯವಾಹ : ಬಿಜೆಪಿ, ಮತ್ತೂರು, ಸ್ವಯಂಸೇವಕ ಸಂಘ, ಮನೆ ಎಲ್ಲವನ್ನೂ ಸಮತೂಕದಲ್ಲಿ ನಿಭಾಯಿಸಿದವರು ಭಾನುಪ್ರಕಾಶ. ಅವರ ಬಗ್ಗೆ ಹೊಟ್ಟೆಕಿಚ್ಚುಪಡುವಷ್ಟು ಅತ್ಯುತ್ತಮ ಹಾಗೂ ಧನ್ಯ ಸ್ವಯಂಸೇವಕ. ಆರ್ಥಿಕ ಪ್ರಾಮಾಣಿಕತೆಯನ್ನು ಸಂಘ ಯಾವಾಗಲೂ ನಿರೀಕ್ಷೆ ಮಾಡುತ್ತದೆ. ಜೇಬು ಮತ್ತು ಕೈಯನ್ನು ಅವರು ಎಂದೂ ಎಂಜಲು ಮಾಡಿಕೊಂಡಿರಲಿಲ್ಲ.
ಇದನ್ನೂ ಓದಿ – ಗೋಪಿ ಸರ್ಕಲ್‌ನಲ್ಲಿ ಎಂ.ಬಿ.ಭಾನುಪ್ರಕಾಶ್ ಕೊನೆಯ ಭಾಷಣ, ಏನೆಲ್ಲ ಹೇಳಿದ್ದರು?, ಇಲ್ಲಿದೆ ಡಿಟೇಲ್ಸ್