ಸಿಡಿಲು ಬಡಿದು ಅಂಗಡಿಗೆ ಬೆಂಕಿ, ವ್ಯಾಪಾರಿ ಸಾವು, ಎಲ್ಲಿ?

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಕುಂಸಿ: ಸಮೀಪದ ರಾಮನಗರದಲ್ಲಿ ಸೋಮವಾರ ಸಂಜೆ ಸಿಡಿಲು (lightning) ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹಾರನಹಳ್ಳಿಯ ಶೇಖ್ ಮುಜೀಬ್‌ ಉರ್‌ ರಹಮಾನ್ (45) ಮೃತಪಟ್ಟಿದ್ದಾರೆ.

Kumsi-Ramanagara-Sheikh-Mujeeb-ur-rehaman-incident.

ಇವರು ರಾಮನಗರದ ಬಸ್ಟ್ಯಾಂಡ್ ಬಳಿಯ ಮರದ ಕೆಳಗೆ ಕೋಳಿ ಅಂಗಡಿ ನಡೆಸುತ್ತಿದ್ದರು. ಸೋಮವಾರ ಸಂಜೆ ಮಳೆಯ ಜತೆ ಕೋಳಿ ಅಂಗಡಿಗೆ ಹಾಗೂ ಪಕ್ಕದಲ್ಲಿರುವ ಮರಕ್ಕೆ ಸಿಡಿಲು ಬಡಿದಿದೆ. ಇದೇ ವೇಳೆ ಅಂಗಡಿಯಲ್ಲಿದ್ದ ಶೇಖ್ ಮುಜೀಬ್ ಉರ್ ರಹಮಾನ್ ಅವರಿಗೂ ಸಿಡಿಲು ಬಡಿದಿದ್ದು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಗಡಿಗೆ ಬೆಂಕಿ ಬಿದ್ದಿದ್ದು, ಕೋಳಿಗಳು ಸುಟ್ಟಿವೆ. ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ : ಮಹಿಳೆಯರೆ ಹುಷಾರ್‌, ಶಿವಮೊಗ್ಗದಲ್ಲಿ ಸಂಘದ ಸಾಲದ ಹೆಸರಲ್ಲಿ ನಡೆಯಿತು ಮಹಾ ವಂಚನೆ, ಆಗಿದ್ದೇನು?

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment