ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIMOGA, 5 AUGUST 2024 : ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಗಂಡು ಸಿಂಹ (Lion) ಆರ್ಯ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಬಹು ಅಂಗಾಂಗ ವೈಫಲ್ಯದಿಂದ ಅಸ್ವಸ್ಥಗೊಂಡಿದ್ದ ಸಿಂಹ ಕೊನೆಯುಸಿರೆಳೆದಿದೆ.
ಆರ್ಯನಿಗೆ ಹುಲಿ ಮತ್ತು ಸಿಂಹಧಾಮದ ವೈದ್ಯ ಡಾ. ಮುರಳಿ ಮನೋಹರ್ ನೇತೃತ್ವದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕಳೆದ ಮೂರು ದಿನದಿಂದ ಆರ್ಯ ಆಹಾರ ಸೇವಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಸಿಂಹಧಾಮದಲ್ಲಿಯೇ ಆರ್ಯನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

2008ರಲ್ಲಿ ಮೈಸೂರು ಮೃಗಾಲಯದಿಂದ ತ್ಯಾವರೆಕೊಪ್ಪಕ್ಕೆ ತರಲಾಗಿತ್ತು. ಸಿಂಹಗಳ ಒಟ್ಟು ಆಯಸ್ಸು 20 ವರ್ಷ. ಆರ್ಯ 18.5 ವರ್ಷ ಬದುಕಿತ್ತು. ತ್ಯಾವರೆಕೊಪ್ಪ ಮೃಗಾಲಯದ ಹಿರಿಯ ಸಿಂಹ ಇದಾಗಿತ್ತು. ಆರ್ಯನ ಸಾವಿನಿಂದಾಗಿ ಈ ಮೃಗಾಲಯದಲ್ಲಿ ಸಿಂಹಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ ⇓
ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ






