SHIVAMOGGA LIVE | 6 JUNE 2023

SHIMOGA : ನಿಯಂತ್ರಣ ತಪ್ಪಿದ ಕಾರು ಮರಕ್ಕೆ (Car Collision) ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ. ಹೊಳಲೂರು ರಸ್ತೆಯ ಹೊಳೆಹಟ್ಟಿ ಬಳಿ ಘಟನೆ ಸಂಭವಿಸಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಶರತ್ (42) ಮೃತ ವ್ಯಕ್ತಿ. ಶರತ್ ಅವರ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿಕೆಲಸದ ನಿಮಿತ್ತ ಶರತ್ ಅವರು ಕುಟುಂಬ ಸಹಿತ ಶಿವಮೊಗ್ಗಕ್ಕೆ ಬಂದು ಮನೆಗೆ ಮರಳುತ್ತಿದ್ದರು. ಶರತ್ ಚಲಾಯಿಸುತ್ತಿದ್ದ ಕಾರು ಹೊಳೆಹಟ್ಟಿ ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ (Car Collision) ಹೊಡದಿದೆ. ಸ್ಥಳದಲ್ಲೇ ಶರತ್ ಅಸುನೀಗಿದ್ದಾರೆ. ಕಾರಿನಲ್ಲಿ ಏರ್ ಬಲೂನ್ ಓಪನ್ ಆಗಿದ್ದರಿಂದ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ – ಆಯನೂರು ಹತ್ಯೆ ಕೇಸ್, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? ಸತೀಶನ ಕಾಲಿಗೆ ಗುಂಡು ಹಾರಿಸಿದ್ದೇಕೆ? ಕಂಪ್ಲೀಟ್ ಮಾಹಿತಿ
ಪ್ರೀತಿ ಅವರ ಬಲಗೈಗೆ ಹೊಡೆತ ಬಿದ್ದಿದೆ. ಕುಶಾಲ್ ತಲೆಗೆ ಗಾಯವಾಗಿದೆ. ಕಾರಿನ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

LATEST NEWS
- ವಿದ್ಯಾನಗರ ಸೇತುವೆ ನಾಮಕರಣ ವಿಚಾರ, ಮುಖ್ಯಮಂತ್ರಿಗೆ ಪತ್ರ ಬರೆದ ಮಾಜಿ ಮಿನಿಸ್ಟರ್

- ಹೊಸನಗರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಲಾರಿಗಳು ಪೊಲೀಸ್ ವಶಕ್ಕೆ, ಕಾರಣವೇನು?

- ಎಂಪಿಎಂ ನಿವೃತ್ತ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

- ಶಿವಮೊಗ್ಗದ ಹಲವೆಡೆ ಜನವರಿ 21ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದ ಲಾಡ್ಜ್ಗಳಲ್ಲಿ ಪೊಲೀಸರಿಂದ ದಿಢೀರ್ ತಪಾಸಣೆ, ಏನೆಲ್ಲ ಪರಿಶೀಲಿಸಿದರು?

About The Editor
ನಿತಿನ್ ಆರ್.ಕೈದೊಟ್ಲು





