ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 02 FEBRUARY 2021
ಉಂಬ್ಳೆಬೈಲು ಅರಣ್ಯ ವಲಯದಲ್ಲಿ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಸಕ್ರೆಬೈಲು ಬಿಡಾರದ ಆನೆಗಳು ಸಜ್ಜಾಗಿವೆ. ಫೆಬ್ರವರಿ 3ರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ.
ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿಯಲು ಸರ್ಕಾರ ಸೂಚಿಸಿದೆ. ಅದರನ್ವಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿ ಶಂಕರ್ ಅವರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಂತೆಯೆ ಫೆಬ್ರವರಿ 3ರಿಂದ ಕಾರ್ಯಾಚರಣೆ ಶುರುವಾಗಲಿದೆ.
ಯಾವೆಲ್ಲ ಊರಿಗೆ ಸಮಸ್ಯೆಯಾಗ್ತಿದೆ?
ಉಂಬ್ಳೆಬೈಲು ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಉಂಬ್ಳೆಬೈಲು, ಸಾರಿಗೆರೆ, ಕೈದೊಟ್ಲು, ಹುರುಳಿಹಳ್ಳಿ, ತೋಟದಕೆರೆ, ಯರಗನಾಳ್, ಹಾಲ್ ಲಕ್ಕವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಳ್ಳುತ್ತಿದೆ. ಇಲ್ಲಿ ಬೆಳೆ ನಾಶ ಮಾಡುತ್ತಿದ್ದು, ರೈತರು ಆತಂಕಕ್ಕಿಡಾಗಿದ್ದಾರೆ.
ಆನೆ ಓಡಿಸುಲು ರಾತ್ರಿಯಲ್ಲ ಕಾವಲು
ಅಡಕೆ, ತೆಂಗು, ಬಾಳೆ, ಭತ್ತ ಸೇರಿದಂತೆ ಇತರೆ ಬೆಳೆಯನ್ನು ಒಂಟಿ ಸಲಗ ನಾಶ ಮಾಡಿತ್ತು. ಇದನ್ನು ತಪ್ಪಿಸುವ ಸಲುವಾಗಿ ಪ್ರತಿ ರಾತ್ರಿ, ಆನೆ ಬರಬಹುದಾದ ದಾರಿಯಲ್ಲಿ, ಜಮೀನಿನ ಮಗ್ಗುಲಲ್ಲಿ ಬೆಂಕಿ ಹಚ್ಚಿಟ್ಟು ರೈತರು ಕಾದು ಕೂರುತ್ತಿದ್ದರು.
ಕಾರ್ಯಾಚರಣೆಗೆ ಮೂರು ಆನೆ
ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯ ಆನೆ ಸೆರೆ ಹಿಡಿಯಲು, ಸಕ್ರೆಬೈಲು ಬಿಡಾರದ ಮೂರು ಆನೆಗಳು ಸಜ್ಜಾಗಿದೆ. ದಸರಾ ಅಂಬಾರಿ ಹೊರುವ ಸಾಗರ ಆನೆ ನೇತೃತ್ವದಲ್ಲಿ ಮತ್ತೊಂದು ಒಂದು ಗಂಡಾನೆ ಮತ್ತು ಹೆಣ್ಣಾನೆ ಕಾರ್ಯಾಚರಣೆ ನಡೆಸಲಿವೆ. ಹಾಲ್ ಲಕ್ಕವಳ್ಳಿಯಿಂದ ಆನೆ ಸೆರೆ ಕಾರ್ಯ ನಡೆಯಲಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422