ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019
ತಾಲೂಕಿನ ಹಾರನಹಳ್ಳಿಯಲ್ಲಿಯ ಮಾರಿ ಗದ್ದುಗೆ ಸಂಬಂಧ ಕಳೆದ ಏಳೆಂಟು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಪ್ರಕರಣ ಇನ್ನೆರಡು ವಾರಗಳಲ್ಲಿ ಇತ್ಯರ್ಥವಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಐದು ವರ್ಷಕ್ಕೊಮ್ಮೆ ವಿವಾದ
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದ ಸಂದರ್ಭದಲ್ಲಿಯೇ ವಿವಾದಿತ ಜಾಗಕ್ಕಾಗಿ ಹಾರನಹಳ್ಳಿ ಅಕ್ಷರಶಃ ಕುದಿಯುತಿರುತ್ತದೆ. ವ್ಯಕ್ತಿಯೊಬ್ಬರ ಆಸ್ತಿ ವಿವಾದವೀಗ ಸಮುದಾಯದ ಸಮಸ್ಯೆಯಂತೆ ಬಿಂಬಿಸಲಾಗಿದೆ. ಅದರ ಪರಿಣಾಮವಾಗಿಯೇ ಭಾನುವಾರ ಮಾರಿ ಹಬ್ಬಕ್ಕಾಗಿ ಪೆಂಡಾಲು ಹಾಕುವ ಸಂಬಂಧ ಸೃಷ್ಟಿಯಾದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿತ್ತು.
ಶಿವಮೊಗ್ಗದಲ್ಲಿ ಬಂದೋಬಸ್ತ್, ಶಾಂತಿ ಸಭೆ
ಘಟನೆಗೆ ಸಂಬಂಧಿಸಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತ, ಗೋಪಿವೃತ್ತ ಮತ್ತಿತರೆಡೆ KSRP ತುಕಡಿಗಳನ್ನು ನಿಯೋಜಿಸಲಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತುಕೊಂಡ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್ ಹಾರನಹಳ್ಳಿಯಲ್ಲಿಯೇ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಸಂಜೆ ಶಾಂತಿ ಸಭೆ ಆಯೋಜಿಸಿದ್ದರು. ಈ ವೇಳೆ ಗದ್ದುಗೆ ಹಾಗೂ ಜಾಗದ ಕುರಿತು ಗ್ರಾಮದ ಮುಖಂಡರು ಚರ್ಚಿಸಿದರು.
15 ದಿನದಲ್ಲಿ ವಿವಾದ ಕ್ಲಿಯರ್
ವಿವಾದವನ್ನು ಇಂದೇ ಬಗೆಹರಿಸುವಂತೆ ಮನವಿ ಮಾಡಿದರು. ಎಲ್ಲ ಅಂಶಗಳನ್ನು ಮನಗಂಡು ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಅವರು, 15 ದಿನಗಳಲ್ಲಿ ಜಾಗದ ಬಗ್ಗೆ ಇರುವ ವಿವಾದವನ್ನು ಇತ್ಯರ್ಥ ಪಡಿಸುವುದಾಗಿ ಹೇಳಿದರು.
‘1919ರಿಂದ ಮಾರಿಕಾಂಬಾ ದೇವಿ ಗದುಗೆ ಇದೆ. ಇಲ್ಲಿಯೇ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಇತ್ತೀಚೆಗೆ ವ್ಯಕ್ತಿಯೊಬ್ಬರು ತಮಗೆ ಸೇರಿದ ಆಸ್ತಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಕಳೆದ ವರ್ಷವೂ ಜಾತ್ರೆ ವೇಳೆಯಲ್ಲಿ ಗಲಾಟೆಯಾಗಿತ್ತು. ಈ ಸಲವೂ ಪೆಂಡಾಲು ಹಾಕುವಾಗ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಅದು ಪರಸ್ಪರ ಹೊಡೆದಾಟಕ್ಕೆ ತಿರುಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದ್ದಾರೆ.
ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಡಿವೈಎಸ್’ಪಿ ಉಮೇಶ್ ನಾಯ್ಕ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು. ಶಾಂತಿ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
A peace meeting was held in Haranahalli after a clash broke between a family and the villagers over Mari Gadduge, where Mari jatre to be held.