ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 14 ಆಗಸ್ಟ್ 2019
ಕಳೆದ ವಾರ ಸುರಿದ ಭಾರಿ ಮಳೆ ಮತ್ತು ನೀರಿನ ರಭಸಕ್ಕೆ, ಶಿವಮೊಗ್ಗ ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಭೂಮಿ ಕೊಚ್ಚಿ ಹೋಗಿದೆ. ಚೆಕ್ ಡ್ಯಾಂನ ಕೋಡಿ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನೀರು ರಭಸವಾಗಿ ಹರಿಯಲು ಆರಂಭವಾದಂತೆ ಡ್ಯಾಂ ಸಮೀಪದ ಕೋಡಿ ಕೊಚ್ಚಿ ಹೋಗುವ ಆತಂಕ ಎದುರಾಗಿತ್ತು. ಹಾಗಾಗಿ ಗ್ರಾಮಸ್ಥರು ಕೂಡಲೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಆದರೆ ಯಾರೊಬ್ಬರು ಇತ್ತ ಸುಳಿಯಲಿಲ್ಲ. ಈವರೆಗು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಜಿಲ್ಲೆಯ ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಹಾನಿಯಾದ ಪ್ರದೇಶದ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಆದರೆ ಶಿವಮೊಗ್ಗ ನಗರ ಸಮೀಪದ ಪುರದಾಳು ಗ್ರಾಮಕ್ಕೆ ಅಧಿಕಾರಿಗಳು ಇನ್ನು ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು, ಪುರದಾಳು ಗ್ರಾಮದಲ್ಲಿನ ಪರಿಸ್ಥಿತಿ ಕುರಿತು ಹಿರಿಯ ಪತ್ರಕರ್ತ ಶಶಿ ಸಂಪಳ್ಳಿ ಅವರು ನೀಡಿ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.
https://www.facebook.com/shashsampalli/videos/2233515483425057/?t=16
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]