SHIVAMOGGA LIVE | 21 JUNE 2023
SHIMOGA : ರೈತರು ಮಳೆಗಾಗಿ ಪ್ರಾರ್ಥನೆ (Rain) ಮಾಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದ ವೇಳೆ ವರುಣ ಪ್ರತ್ಯಕ್ಷವಾಗಿದ್ದಾನೆ. ಜಿಲ್ಲೆಯ ವಿವಿಧೆಡೆ ಜೋರು ಮಳೆಯಾಗಿದೆ. ಇದರಿಂದ ಪುಳಕಿತರಾದ ಭಕ್ತರು ದೇವಸ್ಥಾನದ ಗಂಟೆ ಬಾರಿಸುತ್ತ ಸಂಭ್ರಮಿಸಿದರು.
ಶಿವಮೊಗ್ಗ ತಾಲೂಕಿನ ಮೇಲಿನ ಹನಸವಾಡಿ ಗ್ರಾಮದ ಶ್ರೀ ಕಪಿಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಏನೇನೆಲ್ಲ ಪೂಜೆ ಸಲ್ಲಿಸಲಾಯಿತು?
ಮುಂಗಾರು ವಿಳಂಬದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ಕೃಪೆ ತೋರುವಂತೆ ಈ ಭಾಗದ ರೈತರು ಶ್ರೀ ಕಪಿಲೇಶ್ವರ ಸ್ವಾಮಿಯ ಮೊರೆ ಹೋಗಿದ್ದರು. ಸೋಮವಾರ ರಾತ್ರಿಯಿಂದ ಸಾಮೂಹಿಕ ಭಜನೆ, ಮಂಗಳವಾರ ಬೆಳಗ್ಗೆ ಗಂಗೆ ಪೂಜೆ, ಅಭಿಷೇಕ ನಡೆಸಿದರು.
ವಿಡಿಯೋ ನೋಡಿ
ಪೂಜೆ ವೇಳೆ ಬಂತು ಮಳೆ
ಗ್ರಾಮಸ್ಥರು ಪೂಜೆ ಸಲ್ಲಿಸಿ, ಅಭಿಷೇಕ ಮಾಡುತ್ತಿದ್ದ ಹೊತ್ತಿಗೆ ಮಳೆ ಆರಂಭವಾಗಿದೆ. ಗಾಳಿ, ಮಳೆಗೆ (Rain) ದೇವಸ್ಥಾನದ ಮುಂದೆ ಹಾಕಿದ್ದ ಶಾಮಿಯಾನ ಕುಸಿದು ಬಿದ್ದಿದೆ. ಜೋರು ಮಳೆಯಾಗುತ್ತಿದ್ದಂತೆ ಗ್ರಾಮಸ್ಥರು ಖುಷಿಯಾಗಿದ್ದಾರೆ. ಶ್ರೀ ಕಪಿಲೇಶ್ವರ ಸ್ವಾಮಿಗೆ ವಂದಿಸಿ, ದೇವಸ್ಥಾನದ ಗಂಟೆ ಬಾರಿ ಮಳೆಯನ್ನು ಸ್ವಾಗತಿಸಿ, ಸಂಭ್ರಮಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಲೆನಾಡ ವೈಭವ, ಬಗೆ ಬಗೆ ವಸ್ತು, ಆಭರಣ ಪ್ರದರ್ಶನ, ವಿವಿಧ ಖಾದ್ಯ ಸವಿದು ಬಾಯಿ ಚಪ್ಪರಿಸಿದ ವಿದ್ಯಾರ್ಥಿಗಳು
ಇದೆ ಮೊದಲಲ್ಲ ಇಂತಹ ಪವಾಡ
ಮೇಲಿನ ಹನಸವಾಡಿ ಸುತ್ತಮುತ್ತ ಗ್ರಾಮಸ್ಥರು ಬಹು ಕಾಲದಿಂದಲು ಶ್ರೀ ಕಪಿಲೇಶ್ವರ ಸ್ವಾಮಿಯನ್ನು ನಂಬಿಕೊಂಡು, ಪೂಜೆ ಸಲ್ಲಿಸುತ್ತಿದ್ದಾರೆ. ಮಳೆಯಾಗದ ಸಂದರ್ಭ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಭಿಷೇಕ ಮಾಡಲಾಗುತ್ತದೆ. ಆಗೆಲ್ಲ ಈ ಭಾಗದಲ್ಲಿ ಮಳೆ ಆರಂಭವಾಗಿದೆ ಅನ್ನುತ್ತಾರೆ ಭಕ್ತರು. ಇನ್ನು, ಈ ದೇವಸ್ಥಾನದಲ್ಲಿ ಒಳ್ಳೆಯ ವಿಚಾರಕ್ಕೆ ಪ್ರಾರ್ಥಿಸಿಕೊಂಡಿದ್ದೆಲ್ಲ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ.
ಇದನ್ನೂ ಓದಿ – ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಮತ್ತೆ ಸಂಕಷ್ಟ, ತಲೆ ಮೇಲೆ ಕೈ ಹೊತ್ತ ಜನ, ಅಧಿಕಾರಿಗಳ ವಿರುದ್ಧ ಆಕ್ರೋಶ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200