ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 21 FEBRURARY 2023
SHIMOGA : ದೆಹಲಿಯಿಂದ ಬಂದ ವಾಯುಸೇನೆ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ (Run Way Test) ನಡೆಸಿತು. ವಿವಿಧ ಬಗೆಯ ಲ್ಯಾಂಡಿಂಗ್, ಟೇಕ್ ಆಫ್ ಮಾಡಲಾಯಿತು.

ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಾಯು ಸೇನೆಯ ಬೋಯಿಂಗ್ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು. ಕೆಲವು ಕ್ಷಣದ ಬಳಿಕ ವಿಮಾನ ಪುನಃ ಟೇಕ್ ಆಫ್ ಮಾಡಿತು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?
ರನ್ ವೇ ಪರೀಕ್ಷೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3 ಕಿ.ಮೀ ರನ್ ವೇ (Run Way Test) ನಿರ್ಮಿಸಲಾಗಿದೆ. ರಾಜ್ಯದಲ್ಲೇ ಅತಿ ಉದ್ದನೆಯ ರನ್ ವೇ ಇದಾಗಿದೆ. ವಾಯು ಸೇನೆಯ ವಿಮಾನ ಸಂಪೂರ್ಣ ರನ್ ವೇ ಬಳಸಿ ಪರೀಕ್ಷೆ ನಡೆಸಿತು. ಇದರ ವಿಡಿಯೋ ಇಲ್ಲಿದೆ.
ವಿವಿಧ ಬಗೆಯ ಲ್ಯಾಂಡಿಂಗ್ ಗಳನ್ನು ಪ್ರಯೋಗಿಸಿತು. ಟಚ್ ಅಂಡ್ ಗೋ ಮಾದರಿಗಳನ್ನು ಪರೀಕ್ಷೆ ನಡೆಸಿತು. ಬಳಿಕ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತು.

CLICK HERE TO JOIN SHIVAMOGGA LIVE WHATSAPP GROUP




