ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020
ಕಾಡಾನೆ ದಾಳಿಗೆ ತುತ್ತಾಗಿ ಸಕ್ರೆಬೈಲಿನ ಸಾಕಾನೆ ರಂಗ (35) ಮೃತಪಟ್ಟಿದೆ. ಕಾಡಿನಲ್ಲಿದ್ದ ವೇಳೆ ರಂಗನ ಮೇಲೆ ದಾಳಿಯಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ.
ಉಳಿದ ಆನೆಗಳಂತೆ ರಾತ್ರಿ ರಂಗನನ್ನು ಕಾಡಿಗೆ ಬಿಡಲಾಗಿತ್ತು. ಈ ವೇಳೆ ಕಾಡಾನೆಗಳು ದಾಳಿಯಾಗಿದೆ. ರಂಗನಿಗೆ ಸರಪಳಿಯಿಂದ ಕಟ್ಟಲಾಗಿತ್ತು. ಹಾಗಾಗಿ ದಾಳಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಬೆಳಗ್ಗೆ ಮಾವುತರು ಆನೆಗಳನ್ನು ಬಿಡಾರಕ್ಕೆ ಕರೆದುಕೊಂಡು ಬರಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು, ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಂಗನ ತಾಯಿ ಗೀತಾ ಸಕ್ರೆಬೈಲಿ ಬಿಡಾರದಲ್ಲಿತ್ತು. ಹಾಗಾಗಿ ಈ ಬಿಡಾರದಲ್ಲೇ ಹುಟ್ಟಿ, ಇಲ್ಲಿಯೇ ಪಳಗಿತ್ತು ರಂಗ. ಅಲ್ಲದೆ ದೈತ್ಯವಾಗಿದ್ದರಿಂದ ಪ್ರವಾಸಿಗರಿಗೆ ಹೆಚ್ಚು ಆಕರ್ಷಿತವಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]