ಸಕ್ರೆಬೈಲಿನ ಸೂರ್ಯ 3000 ಕಿ.ಮೀ ದೂರದ ಕಾಡಿಗೆ ವರ್ಗ, ಸಿಬ್ಬಂದಿ ಜೊತೆ ಕೊನೆಯ ಫೋಟೊ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 NOVEMBER 2022

SHIMOGA | ಸಕ್ರೆಬೈಲು ಆನೆ ಬಿಡಾರದ ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ (elephant transfer). ಬಿಡಾರದ ಸಿಬ್ಬಂದಿ ಸೂರ್ಯನೊಂದಿಗೆ ಕೊನೆಯ ಫೋಟೊ ಕ್ಲಿಕ್ಕಿಸಿಕೊಂಡು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಿದರು.

ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಫಿಲಿಬಿಟ್ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ. ಈಗಾಗಲೆ ಅಲ್ಲಿಂದ ಲಾರಿ ಆಗಮಿಸಿದ್ದು ಸೂರ್ಯ ಆನೆಯನ್ನು ಲಾರಿ ಹತ್ತಿಸಲಾಗಿದೆ.

(elephant transfer)

ಭಾವನಾತ್ಮಕ ಬೀಳ್ಕೊಡುಗೆ

ಸರ್ಕಾರದ ಸೂಚನೆ ಮೇರೆಗೆ ಸೂರ್ಯ ಅನೆಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ (elephant transfer). ಈ ಹಿನ್ನಲೆ ಸಕ್ರೆಬೈಲು ಬಿಡಾರದ ಸಿಬ್ಬಂದಿ ಸೂರ್ಯನಿಗೆ ಬೀಳ್ಕೊಡುಗೆ ನೀಡಿದರು. ಸೂರ್ಯ ಆನೆಯ ಮಾವುತ, ಕಾವಾಡಿ, ಬಿಡಾರದ ಉಳಿದ ಸಿಬ್ಬಂದಿ ಆನೆಯೊಂದಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಸುರಕ್ಷಿತವಾಗಿ ಲಾರಿ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ.

(elephant transfer)

ಉತ್ತರ ಪ್ರದೇಶಕ್ಕೇಕೆ ಸಕ್ರೆಬೈಲು ಆನೆ?

12 ವರ್ಷದ ಸೂರ್ಯ ಆನೆಯು ಸಕ್ರೆಬೈಲು ಬಿಡಾರದ ನೇತ್ರಾಳ ಮಗ. ಬಿಡಾರದ ಸಿಬ್ಬಂದಿಯೊಂದಿಗೆ ಚನ್ನಾಗಿ ಹೊಂದಿಕೊಂಡಿದ್ದ ಸೂರ್ಯ ಇನ್ಮುಂದೆ ಉತ್ತರ ಪ್ರದೇಶದ ಫಿಲಿಬಿಟ್ ಕಾಡಿನಲ್ಲೆ ಕಳೆಯಬೇಕಾಗುತ್ತದೆ. ಉತ್ತರ ಪ್ರದೇಶ ಸರ್ಕಾರ ಆನೆಗಳಿಗಾಗಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆ ವಿವಿಧೆಡೆಯ ಆಯ್ದ ಕೆಲವು ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಸಕ್ರೆಬೈಲಿನಿಂದ ಸೂರ್ಯ ಆನೆಯನ್ನು ಕಳುಹಿಸಲಾಗುತ್ತಿದೆ.

Shimoga Nanjappa Hospital

ಉತ್ತರ ಪ್ರದೇಶದಿಂದ ಬಂದಿತ್ತು ಟೀಮ್

ಆನೆಗಳ ಆಯ್ಕೆ ಮಾಡಲು ಉತ್ತರ ಪ್ರದೇಶದಿಂದಲೆ ವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ತಂಡ ರಾಜ್ಯಕ್ಕೆ ಆಗಮಿಸಿತ್ತು. ವಿವಿಧ ಬಿಡಾರಗಳಿಗೆ ತೆರಳಿ ನಾಲ್ಕು ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಉತ್ತರ ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಿರುವ ಆನೆಗಳನ್ನು ಗುರುತಿಸಲಾಗಿತ್ತು. ಅದರಂತೆ ಸರ್ಕಾರಗಳ ನಡುವೆ ಒಪ್ಪಂದವಾಗಿದ್ದು ಆನೆಗಳನ್ನು ವರ್ಗಾಯಿಸಲಾಗುತ್ತಿದೆ. ಸಕ್ರೆಬೈಲಿನ ಸೂರ್ಯ, ದುಬಾರೆಯ ರಾಮಪುರ ಕ್ಯಾಂಪ್ ಮತ್ತು ಕೊಡಗಿನ ತಿತಿಮತಿಯ ಇನ್ನು ಮೂರು ಆನೆಗಳು ಉತ್ತರ ಪ್ರದೇಶದತ್ತ ಹೊರಟಿವೆ.

ಕ್ಲಿಕ್ ಮಾಡಿ ಇದನ್ನೂ ಓದಿ ಸಹ್ಯಾದ್ರಿ ಕಾಲೇಜು ಕಾಂಪೌಂಡ್ ಧ್ವಂಸ, ಗಂಧದ ಮರಗಳು ಕಟ್

ಪೊಲೀಸ್ ಎಸ್ಕಾರ್ಟ್, ಆಗಾಗ ಸ್ನಾನ

ರಾಜ್ಯದಿಂದ ಹೊರಟಿರುವ ಆನೆಗಳು ಉತ್ತರ ಪ್ರದೇಶದ ಫಿಲಿಬಿಟ್ ಆರಣ್ಯ ತಲುಪುವ ತನಕ ಅನೇಕ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆನೆ ಸಾಗುವ ಮಾರ್ಗವನ್ನು ಈಗಾಗಲೆ ಗುರುತಿಸಲಾಗಿದೆ. ಆನೆಗಳು ಇರುವ ಲಾರಿ ತೆರಳುತ್ತಿದ್ದಂತೆ ಆಯಾ ಜಿಲ್ಲೆಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಎಸ್ಕಾರ್ಟ್ ಮಾಡಬೇಕಿದೆ. ನಿತ್ಯ 250 ಕಿ.ಮೀ ಮಾತ್ರ ಆನೆಯನ್ನು ಕೊಂಡೊಯ್ಯಬೇಕಿದೆ. ನಿತ್ಯ ಉಳಿದುಕೊಳ್ಳಲು ಆಯಾ ಜಿಲ್ಲೆಯಲ್ಲಿ ನಿಗದಿತ ಸ್ಥಳವನ್ನು ಒದಗಿಸಬೇಕಿದೆ. ಇನ್ನು ಪ್ರತಿ ಮೂರು ಗಂಟೆಗೆ ಒಮ್ಮೆ ಆನೆಗೆ ಸ್ನಾನ ಮಾಡಿಸಬೇಕಾಗುತ್ತದೆ.

elephant transfer from sakrebyle

ಸಕ್ರೆಬೈಲಿನ ವೈದ್ಯಾಧಿಕಾರಿ ಡಾ. ವಿನಯ್, ಕಾವಾಡಿಗಳಾದ ರಾಜೇಶ್, ಅಮ್ಜದ್ ಅವರು ಸೂರ್ಯ ಅನೆಯೊಂದಿಗೆ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾರೆ. ಅಲ್ಲಿಯ ವಾತಾವರಣಕ್ಕೆ ಆನೆ ಹೊಂದಿಕೊಂಡ ಬಳಿಕ ಇವರು ಹಿಂತಿರುಗಲಿದ್ದಾರೆ.

ಆನೆ ವರ್ಗಾವಣೆ ಇದೆ ಮೊದಲಲ್ಲ

ಉತ್ತರ ಪ್ರದೇಶದ ಆರಣ್ಯಗಳಿಗೆ ರಾಜ್ಯದ ಆನೆಗಳ ವರ್ಗಾವಣೆ ಇದೆ ಮೊದಲಲ್ಲ.  2017ರಲ್ಲಿ ರಾಜ್ಯದ ವಿವಿಧ ಬಿಡಾರಗಳಿಂದ 10 ಆನೆಗಳನ್ನು ಅಲ್ಲಿಯ ದೂದ್ವ ರಾಷ್ಟ್ರೀಯ ಉದ್ಯಾನಕ್ಕೆ ಆನೆಗಳನ್ನು ಕಳುಹಿಸಲಾಗಿತ್ತು. ಆಗ ಸಕ್ರೆಬೈಲು ಬಿಡಾರದಿಂದ 4 ಆನೆಗಳನ್ನ ಕಳುಹಿಸಲಾಗಿತ್ತು.

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment