ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 APRIL 2023
SHIMOGA : ಕೇಂದ್ರ ಕಾರಾಗೃಹದಲ್ಲಿ (Jail) ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನಾನ ಮಾಡುವ ನಾರನ್ನು ಹಗ್ಗವಾಗಿ ಮಾಡಿಕೊಂಡು ಸೆಲ್ ಒಳಗೆ ನೇಣು ಬಿಗಿದುಕೊಂಡಿದ್ದಾನೆ. ಕೂಡಲೆ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ದುಗ್ಗದಮನೆ ನಿವಾಸಿ ಕರುಣಾಕರ ದೇವಾಡಿಗ (24) ಆತ್ಮಹತ್ಯೆ ಮಾಡಿಕೊಂಡ ಕೈದಿ. ಬೆಳಗ್ಗೆ ಸಹ ಕೈದಿಗಳು ಉಪಾಹಾರ ತರಲು ಹೋಗಿದ್ದ ವೇಳೆ ಕರುಣಾಕರ ದೇವಾಡಿಗ ನೇಣು ಬಿಗಿದುಕೊಂಡಿದ್ದಾನೆ. ಇತರೆ ಕೈದಿಗಳನ್ನು ಇದನ್ನು ಗಮನಿಸಿ, ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕರುಣಾಕರನ ಮೃತಪಟ್ಟಿದ್ದಾನೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗ ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಭದ್ರಾವತಿ ಠಾಣೆಗೆ ತೆರಳಿ ದೂರು ನೀಡಿದ ಕೈದಿ, ಕಾರಣವೇನು?
ಭದ್ರಾವತಿ ತಾಲೂಕು ಸುಣ್ಣದಹಳ್ಳಿಯ ದೇವಸ್ಥಾನದ ಬಳಿ ಬಂಗಾರದ ಕಿವಿಯೋಲೆ ಮತ್ತು ಮೂಗುತಿಗಾಗಿ ವೃದ್ಧೆಯೊಬ್ಬರನ್ನು ಕರುಣಾಕರ ಕೊಲೆ ಮಾಡಿದ್ದ. ಭದ್ರಾವತಿ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿ (Jail) ಕರುಣಾಕರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದೆ. ಆತನಿಗೆ ವೈದ್ಯರು ಕೌನ್ಸೆಲಿಂಗ್ ಕೂಡ ಮಾಡಿದ್ದರು.
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.