ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020
ಸಕ್ರೆಬೈಲು ಆನೆ ಬಿಡಾರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಶೂಟಿಂಗ್ ನಡೆಯಿತು.
ಆನೆ ಮೇಲೆ ಕುಳಿತು ಹೋಗುವ ಸೀನ್ ಮತ್ತು ಆನೆಗೆ ಸ್ನಾನ ಮಾಡಿಸುವ ಸೀನ್’ಗಳನ್ನು ಶೂಟಿಂಗ್ ಮಾಡಲಾಯಿತು. ಇದಕ್ಕಾಗಿ ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ಏರಿಯಾ ಮತ್ತು ತುಂಗಾ ನದಿ ತೀರದಲ್ಲಿ ಚಿತ್ರೀಕರಣ ಮಾಡಲಾಯಿತು.
ಸತತ ನಾಲ್ಕು ಗಂಟೆ ಕಾಲ ಆನೆ ಬಿಡಾರದಲ್ಲಿ ನಟ ಶಿವರಾಜ್ ಕುಮಾರ್ ಅವರು ಶೂಟಿಂಗ್’ನಲ್ಲಿ ಭಾಗವಹಿಸಿದ್ದರು. ಸಕ್ರೆಬೈಲು ಕೆಲವು ಆನೆಗಳನ್ನು ಶೂಟಿಂಗ್’ಗೆ ಬಳಕೆ ಮಾಡಿಕೊಳ್ಳಲಾಯಿತು.
ಬಿಡಾರದ ಸಿಬ್ಬಂದಿಗಳ ಜೊತೆಗೆ ಫೋಟೊ
ಶೂಟಿಂಗ್ ಬಳಿಕ ನಟ ಶಿವರಾಜ್ ಕುಮಾರ್ ಅವರು ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿಗಳ ಜೊತೆ ಕೆಲಕಾಲ ಚರ್ಚಿಸಿದರು. ಈ ವೇಳೆ ಸಿಬ್ಬಂದಿಗಳ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡರು. ಅಲ್ಲದೆ ಆನೆ ಬಿಡಾರದ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Shooting for Bajarangi 2 Cinema was held at Sakrebyle in Shimoga. Actor Shivarajkumar participated in the shooting with sakrebyle Elephants.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422