ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 15 JULY 2023
HOLEHONNURU : ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಯವರ 28ನೇ ಚಾತುರ್ಮಾಸ್ಯ (Chaturmasya) ಹೊಳೆಹೊನ್ನೂರಿನಲ್ಲಿ ನಡೆಯುತ್ತಿದೆ. ಟೀ ಇಂಡಿಯಾ ಮಾಜಿ ಆಲ್ರೌಂಡರ್ ವಿಜಯ ಭಾರದ್ವಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ, ಚಾತುರ್ಮಾಸ್ಯ ಗೀತೆಗಳನ್ನು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ – ಸಿಗಂದೂರು, ಹಸಿರುಮಕ್ಕಿ ಲಾಂಚ್ಗಳ ಸೇವೆ ಯಥಾಸ್ಥಿತಿಗೆ, ಸ್ಥಳೀಯರಲ್ಲಿ ನಿಟ್ಟುಸಿರು, ಪ್ರವಾಸಿಗರು ಫುಲ್ ಖುಷ್
ತಮ್ಮ 28ನೇ ಚಾತುರ್ಮಾಸ್ಯದ (Chaturmasya) ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಗಳು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಸಂದೇಶ ನೀಡಿದರು.
ಇದಕ್ಕೂ ಪೂರ್ವ ಮುಕುಂದಾಚಾರ್ಯ ರಾಯಚೂರು ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ರಾಮಧ್ಯಾನಿ ಅನಿಲ್, ಗುರುರಾಜ್ ಮೊದಲಾದವರಿದ್ದರು.
ಚಾತುರ್ಮಾಸ್ಯ ಗೀತೆ ಬಿಡುಗಡೆ
ಇದೇ ಸಂರ್ಭದಲ್ಲಿ ಚಾತುರ್ಮಾಸ್ಯ ಗೀತೆಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀನಿ ಆಚಾರ್ಯ ಅವರು ರಚಿಸಿರುವ ಮೂಲರಾಮನ ಚಾತುರ್ಮಾಸ್ಯಕ್ಕೆ ಹೊಳೆಹೊನ್ನೂರಿಗೆ ಹೋಗೋಣ ಮತ್ತು ಸುಮಂತ ಮನ್ನಾರಿ ರಚಿಸಿರುವ ಸತ್ಯಾತ್ಮ ತೀರ್ಥರ ದರುಶನ ಮಾಡಿ ಪಾವನರಾಗೋಣ ಎಂಬ ಎರಡು ಹಾಡುಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಗೀತೆಗಳನ್ನು ಕೆ. ವೇಣುಗೋಪಾಲ್ ಅವರು ಹಾಡಿದ್ದು, ವಾದಿರಾಜ ಕಾಖಂಡಕಿ ರಾಗ ಸಂಯೋಜನೆ ಮಾಡಿದ್ದಾರೆ. ವಿನಯ್ ರಂಗೋಳ್ ಸಂಗೀತ ಪರಿಕಲ್ಪನೆ ಮತ್ತು ಸುಜಯ ಬಾಗೇವಾಡಿ ಸಂಗೀತ ಚಿಂತನೆ ನೀಡಿದ್ದಾರೆ.
ಮಾಜಿ ಕ್ರಿಕೆಟಿಗನಿಗೆ ಗೌರವ
ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಶುಕ್ರವಾರ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ವಿಜಯ ಭಾರದ್ವಾಜ್ ಭಾಗವಹಿಸಿದ್ದರು. ಈ ವೇಳೆ ವ್ಯವಸ್ಥಾಪನಾ ಸಮಿತಿಯಿಂದ ಅವರನ್ನು ಗೌರವಿಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422