ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 31 AUGUST 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ವಿಮಾನದಲ್ಲಿ ರಸಪ್ರಶ್ನೆ ಕಾರ್ಯಕ್ರಮ (Quiz Competition) ನಡೆಸಲಾಯಿತು. ಸರಿಯಾದ ಉತ್ತರ ನೀಡಿದವರಿಗೆ ಬೆಳ್ಳಿ ನಾಣ್ಯಗಳನ್ನು (Silver Coin) ಬಹುಮಾನವಾಗಿ ನೀಡಲಾಗಿದೆ.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಯೂಥ್ ಹಾಸ್ಟೆಲ್ ವತಿಯಿಂದ ಈ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಈ ಕುರಿತು ಯೂಥ್ ಹಾಸ್ಟೆಲ್‌ನ ಪ್ರಮುಖ ಆ.ನಾ.ವಿಜಯೇಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದ ಮೊದಲ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಪ್ರಮುಖ ವಿಚಾರ
ನಮ್ಮೂರು ನಮಗೆಷ್ಟು ಗೊತ್ತು?
ಬೆಂಗಳೂರಿನಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಮ್ಮೂರು ಶಿವಮೊಗ್ಗ ನಮಗೆಷ್ಟು ಗೊತ್ತು ಅನ್ನುವ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಸರಿಯಾದ ಉತ್ತರ ನೀಡಿದವರಿಗೆ ಹತ್ತು ಬೆಳ್ಳಿ ನಾಣ್ಯಗಳು (Silver Coin), ಪುಸ್ತಕಗಳನ್ನು ವಿತರಿಸಲಾಯಿತು ಎಂದು ಆ.ನಾ.ವಿಜಯೇಂದ್ರ ತಿಳಿಸಿದರು.