ಶಿವಮೊಗ್ಗ ಲೈವ್.ಕಾಂ |SHIMOGA NEWS | 17 NOVEMBER 2020
ಶಿವಮೊಗ್ಗದಲ್ಲಿ ಮೊಲದ ಮರಿಗಳನ್ನು ನುಂಗಿದ್ದ ನಾಗರ ಹಾವನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಹರಕೆರೆಯಲ್ಲಿರುವ ತುಂಗಾ ಏತನೀರಾವರಿ ಯೋಜನೆ ಕಚೇರಿಯಲ್ಲಿ ಮೊಲದ ಮರಿಗಳ ಮೇಲೆ ಹಾವು ದಾಳಿ ಮಾಡಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೂರು ಮರಿ ನುಂಗಿದ್ದ ನಾಗರ
ತುಂಗಾ ಏತ ನೀರಾವರಿ ಕಚೇರಿಯಲ್ಲಿ ಮೊಲಗಳನ್ನು ಸಾಕಲಾಗಿದೆ. ಇತ್ತೀಚೆಗೆ ಮೊಲವೊಂದು ಮರಿ ಹಾಕಿತ್ತು. ಇವತ್ತು ತುಂಗಾ ನದಿ ಕಡೆಯಿಂದ ಕಚೇರಿ ಕಾಂಪೌಂಡ್ಗೆ ಬಂದ ಹಾವು, ನಾಲ್ಕು ಮೊಲದ ಮರಿಗಳನ್ನು ಕಚ್ಚಿದೆ. ಮೂರು ಮರಿಗಳನ್ನು ನುಂಗಿತ್ತು. ಈ ವೇಳೆ ಹಾವನ್ನು ಕಂಡ ಸ್ಥಳೀಯರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದರು.
ಉಳಿದ ಮೊಲಗಳು, ಹಾವು ರಕ್ಷಣೆ
ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದಿದ್ದಾರೆ. ಹಾವು ಸುಮಾರು ನಾಲ್ಕುವರೆ ಅಡಿ ಉದ್ದವಿದೆ. ಹಾವನ್ನು ರಕ್ಷಿಸಿದ ಸ್ನೇಕ್ ಕಿರಣ್, ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಹಾವಿನ ದಾಳಿಯಿಂದ ಉಳಿದ ಮೊಲಗಳನ್ನು ರಕ್ಷಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]