ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 MAY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಬಿ.ಬೀರನಹಳ್ಳಿಯ ವೆಂಕಟಾಪುರ ಗ್ರಾಮದ ಶ್ರೀ ತಿರುಮಲ ದೇವರ ದೇವಸ್ಥಾನ (Temple) ಸಮಿತಿಯಿಂದ ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಮೇ 28, 29ರಂದು ತಿರುಕಲ್ಯಾಣೋತ್ಸವ ಸೇರಿದಂತೆ ಹೋಮ, ಹವನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ದೇವಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 28ರಂದು ಸಂಜೆ 5ಕ್ಕೆ ಗುರು ಪ್ರಾರ್ಥನೆ, ಅನುಜ್ಞೆ ಮಹಾಸಂಕಲ್ಪ ಮಹಾಗಣಪತಿ ಆರಾಧನೆ, ಸಂಜೆ 7ಕ್ಕೆ ಶ್ರೀ ತಿರುಮಲ ರಂಗನಾಥ ಸ್ವಾಮಿ ಕಲ್ಯಾಣೋತ್ಸವ ಜರುಗಲಿದೆ. 29ರ ಬೆಳಗ್ಗೆ 6ಕ್ಕೆ ಸುಪ್ರಭಾತ ಸೇವೆ, ಕಲಶಾರಾಧನೆ, ಅಭಿಷೇಕ, ವಿವಿಧ ಹೋಮಗಳನ್ನು ನಡೆಸುವ ಜತೆಗೆ ವಿಶೇಷವಾಗಿ ರಂಗನಾಥ ಸ್ವಾಮಿ ಮೂಲಮಂತ್ರ ಹೋಮ, ಮಹಾ ಸುದರ್ಶನ ಹೋಮ, ನರಸಿಂಹ ಮೂಲ ಮಂತ್ರ ಹೋಮ, ಮಹಾ ಪೂರ್ಣಾಹುತಿ ನಡೆಯಲಿದೆ ಎಂದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಸ್ತೆಗಿಳಿದ ಚೆನ್ನಮ್ಮ ಪಡೆ, ಕಾರ್ಯಾಚರಣೆ ಆರಂಭ
ಎಲ್ಲ ಧಾರ್ಮಿಕ ಕಾರ್ಯಗಳು ಬೆಂಗಳೂರಿನ ಕೆಂಗೇರಿಯ ರಾಮಾನುಜ ಮಠದ ಶ್ರೀ ಚಿರಂಜೀವಿ ರಾಮಚಂದ್ರ ಭಟ್ಟಾಚಾರ್ಯ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಿನೇಶ್ ಪಟೇಲ್, ಅಜಯ್, ಬಸವರಾಜ್, ಮತ್ತಿತರರಿದ್ದರು