ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ವಾದ್ಯ ನುಡಿಸಲು ತೆರೆಳುತ್ತಿದ್ದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಬುಳ್ಳಾಪುರದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿ ತಾಲೂಕು ಕುರುವ ಗ್ರಾಮದ ರಮೇಶ್ (19), ಹೊನ್ನಾಳಿ ತಾಲೂಕು ಸೊರಟೂರು ಗ್ರಾಮದ ಅಜಯ್ (23) ಮೃತರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಘಟನೆ ಸಂಭವಿಸಿದ್ದು ಹೇಗೆ?
ಶಿವಮೊಗ್ಗದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ವಾದ್ಯ ನುಡಿಸಲು ರಮೇಶ್, ಅಜಯ್ ಸೇರಿದಂತೆ ಐವರು ಮೂರು ಬೈಕ್ಗಳಲ್ಲಿ ತೆರಳುತ್ತಿದ್ದರು. ಬುಳ್ಳಾಪುರದಲ್ಲಿ ಹಿಂಬದಿಯಿಂದ ಬಂದ ಬೈಕ್ ರಮೇಶ್ ಮತ್ತು ಅಜಯ್ ತೆರಳುತ್ತಿದ್ದ ಬೈಕ್ ಹಿಂದಿಕ್ಕುವ ರಭಸದಲ್ಲಿ ಡಿಕ್ಕಿ ಹೊಡೆದಿದೆ.
ಎರಡು ಬೈಕ್ನಲ್ಲಿದ್ದವರು ಕೆಳಗೆ ಬಿದ್ದಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಾಗ ಅಜಯ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ರಮೇಶ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸಂಸತ್ತಿನಲ್ಲಿ ಶಿವಮೊಗ್ಗ ಸಂಸದರು ಕೇಳಿದ ಮೊದಲ ಪ್ರಶ್ನೆ ಏನು? ಸಚಿವರ ಉತ್ತರವೇನಿತ್ತು? ಇಲ್ಲಿದೆ ಡಿಟೇಲ್ಸ್