SHIVAMOGGA LIVE NEWS | 27 FEBRURARY 2023
SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದ ವೇದಿಕೆ ಮುಂಭಾಗ ವಿಐಎಸ್ಎಲ್ ಕಾರ್ಮಿಕರು ಬಾಯಿ ಬಡಿದುಕೊಂಡು, ಘೋಷಣೆ (Slogans) ಕೂಗಿದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರು.
ಸೋಗಾನೆಯಲ್ಲಿ ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ಪ್ರಧಾನಿ ಗಮನ ಸೆಳೆಯಲು ವಿಐಎಸ್ಎಲ್ ಕಾರ್ಮಿಕರು ಘೋಷಣೆ ಮೊಳಗಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾರ್ಮಿಕರು, ಕುಟುಂಬದಿಂದ ಘೋಷಣೆ
ಕಾರ್ಯಕ್ರಮಕ್ಕೆ ಕುಟುಂಬ ಸಹಿತ ಆಗಮಿಸಿದ್ದ ವಿಐಎಸ್ಎಲ್ ಕಾರ್ಮಿಕರು ಘೋಷಣೆಗಳನ್ನು (Slogans) ಕೂಗಿದರು. ವಿಐಎಸ್ಎಲ್ ಉಳಿಸಿ ಎಂದು ಘೋಷಣೆ ಮೊಳಗಿಸಿ, ಬಾಯಿ ಬಡಿದುಕೊಂಡು ನೋವು ತೋಡಿಕೊಂಡರು. ತಮ್ಮ ಟೀಶರ್ಟ್ ಮೇಲಿರುವ SAVE VISL ಘೋಷಣೆ ಪ್ರದರ್ಶಿಸಿದರು.
ಮೆರವಣಿಗೆ ಹೊರಟವರು ವಶಕ್ಕೆ
ಇನ್ನು, ಇಂದು ಬೆಳಗ್ಗೆ ವಿಐಎಸ್ಎಲ್ ಕಾರ್ಖಾನೆ ಮುಂಭಾಗದಿಂದ ಸೋಗಾನೆ ವಿಮಾನ ನಿಲ್ದಾಣದವರೆಗೆ ಕಾರ್ಮಿಕರು ಮೆರವಣಿಗೆ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಕಾರ್ಮಿಕರನ್ನು ತಡೆದರು. ಕೆಲವು ಹೊತ್ತು ಪೊಲೀಸರು ಮತ್ತು ಕಾರ್ಮಿಕರ ನಡುವೆ ನೂಕಾಟ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರು ಕಾರ್ಮಿಕರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಹೆಸರಿನ ವಿಚಾರ, ಕುತೂಹಲ ಉಳಿಸಿ ಹೋದ ಪ್ರಧಾನಿ ಮೋದಿ