SHIVAMOGGA LIVE NEWS | 21 FEBRURARY 2023
SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ. ವಿಮಾನ ಲ್ಯಾಂಡಿಂಗ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಟ್ಸಪ್ ಸ್ಟೇಟಸ್, ಫೇಸ್ ಬುಕ್, ಇನ್ ಸ್ಟಾಗ್ರಾಂಗಳಲ್ಲಿ ವಿಮಾನದ ಲ್ಯಾಂಡಿಂಗ್ ವಿಡಿಯೋ ರಾರಾಜಿಸುತ್ತಿದೆ. (Water Salute)
ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್
ವಿಮಾನಯಾನ ಕ್ಷೇತ್ರದಲ್ಲಿ ವಾಟರ್ ಸಲ್ಯೂಟ್ ನೀಡುವುದು ಪದ್ಧತಿ. ಸಂಭ್ರಮಾಚರಣೆ ವೇಳೆ ವಟರ್ ಸಲ್ಯೂಟ್ (Water Salute) ನೀಡಲಾಗುತ್ತದೆ. ಅದರಂತೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು. ಎರಡು ಫೈರ್ ಫೈಟಿಂಗ್ ವೆಹಿಕಲ್ ಗಳ ಮೂಲಕ ನೀರನ್ನು ಮೇಲಕ್ಕೆ ಹಾಯಿಸಿ, ವಿಮಾನವನ್ನು ಬರ ಮಾಡಿಕೊಳ್ಳಲಾಯಿತು.
ATCಯಿಂದ ವಿಹಂಗಮ ನೋಟ
ವಾಯು ಸೇನೆಯ ಬೋಯಿಂಗ್ ವಿಮಾನ ಲ್ಯಾಂಡಿಂಗ್ ಆಗುವ ದೃಶ್ಯ ಏರ್ ಟ್ರಾಫಿಕ್ ಕಂಟ್ರೋಲ್ ರೂಮಿನಿಂದ ಚಿತ್ರೀಕರಣ ಮಾಡಲಾಗಿದೆ. ಮೊಬೈಲ್ ನಲ್ಲಿ ಚಿತ್ರೀಕರಣವಾದ ವಿಹಂಗಮ ದೃಶ್ಯವು ವೈರಲ್ ಆಗಿದೆ. ರನ್ ವೇಗೆ ಇಳಿಯುತ್ತಿದ್ದಂತೆ ಜೋರಾಗಿ ಧೂಳು ಮೇಲೇಳುತ್ತದೆ. ಸ್ವಲ್ಪ ದೂರ ಚಲಿಸಿ ವಿಮಾನದ ವೇಗ ಕಡಿಮೆಯಾಗಲಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮೊಟ್ಟಮೊದಲ ವಿಮಾನ