ಡೇಂಜರ್‌ ಕೊಳವೆ ಬಾವಿ, ಇನ್ನಾದರೂ ಮುಚ್ಚಿಸುತ್ತಾ ಪಟ್ಟಣ ಪಂಚಾಯಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 OCTOBER 2023

ANAVATTI : ನೀರು ಸಿಗದೆ ಫೇಲ್‌ ಆಗಿದ್ದ ಕೊಳವೆ ಬಾವಿಯನ್ನು (Borewell) ಮುಚ್ಚದೆ ಹಾಗೆ ಬಿಡಲಾಗಿದೆ. ಇದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಕೊಳವೆ ಬಾವಿ ಮುಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೊರಬ ತಾಲೂಕು ಆನವಟ್ಟಿಯ ಕುಡಿಯುವ ನೀರಿನ ಹೊಂಡದ ಏರಿ ಮೇಲೆ ಪಟ್ಟಣ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಸಲಾಗಿತ್ತು. ಅದರಲ್ಲಿ ನೀರು ಸಿಕ್ಕಿರಲಿಲ್ಲ. ಆದರೆ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆ ಬಿಡಲಾಗಿದೆ. ಸಮೀಪದಲ್ಲೇ ವಿವಿಧ ಶಿಕ್ಷಣ ಸಂಸ್ಥೆ, ಹಾಸ್ಟೆಲ್‌ಗಳಿವೆ. ಮಕ್ಕಳು ಈ ಭಾಗದಲ್ಲಿ ಓಡಾಡುತ್ತಿರುತ್ತಾರೆ. ಸ್ವಲ್ಪ ಯಾಮಾರಿದರು ಕೊಳವೆ ಬಾವಿಯೊಳಗೆ ಮಕ್ಕಳು ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆ ನಿರುಪಯುಕ್ತ ಕೊಳವೆ ಬಾವಿಯನ್ನು ತಕ್ಷಣ ಬಂದ್‌ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ- ಚೋರಡಿ ಸುತ್ತಮುತ್ತ ಕಾಡಾನೆ ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಸಂಚಾರ, ಬೆಳೆ ನಷ್ಟದಿಂದ ಕಂಗಾಲದ ರೈತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 20, 2023

Leave a Comment