ಶಿವಮೊಗ್ಗ ಲೈವ್.ಕಾಂ | SORABA NEWS | 30 MAY 2021
ಕರೋನ ವ್ಯಾಪಕವಾಗಿ ಹರಡುತ್ತಿರುವುದು ಮತ್ತು ಲಾಕ್ ಡೌನ್ ಹಿನ್ನೆಲೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಮಗಳ ಮದುವೆಯನ್ನು ಮುಂದೂಡಿದ್ದಾರೆ.
ಕುಮಾರ್ ಬಂಗಾರಪ್ಪ ಪುತ್ರಿ ಲಾವಣ್ಯ ಅವರ ವಿವಾಹವು ಹೈದರಾಬಾದ್ನ ವೈದ್ಯ ಡಾ. ವಿಕ್ರಮಾದಿತ್ಯ ಅಥೆಲಿ ಜೊತೆ ನಿಶ್ಚಯವಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇವತ್ತು ವಿವಾಹ ನಡೆಯಬೇಕಿತ್ತು.
ಜೂನ್ 4ರಂದು ಸೊರಬದಲ್ಲಿ ರಿಸೆಪ್ಷನ್ ನಿಗದಿಯಾಗಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆ ಮದುವೆ ಸಮಾರಂಭವನ್ನು ಮುಂದೂಡಿದ್ದಾರೆ. ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಕುಮಾರ್ ಬಂಗಾರಪ್ಪ ಅವರ ಕುಟುಂಬದ ಮೂಲಗಳು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]