ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019
ಕರೆಕ್ಟಾದ ಪ್ಯಾಕೇಜ್ ಬಾರದೆ ಇದ್ದಿದ್ದರಿಂದಲೇ, ಮುಖ್ಯಮಂತ್ರಿ ಶಿವಮೊಗ್ಗ ಭೇಟಿ ವೇಳೆ ನನ್ನ ತಮ್ಮ ಕಾಣಿಸಲಿಲ್ಲ. ಪ್ಯಾಕೇಜ್ ಕುರಿತು ಸ್ಪಷ್ಟತೆ ಸಿಗುವವರೆಗೂ ಅಭ್ಯರ್ಥಿಯಾಗಿ ಅವರು ಕ್ಷೇತ್ರಕ್ಕೆ ಬರಲಿಲ್ಲ. ಹೀಗಂತ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ.
![]() |
ಸೊರಬ ತಾಲೂಕು ಕೋಟಿಪುರ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ವಿಧಾನಸಭೆ ಚುನಾವಣೆ ಬಳಿಕ ಪ್ಯಾಕೇಜ್ ಟೂರ್ ಹೋದವರು, ಮಧ್ಯರಾತ್ರಿ ಮೂರು ಗಂಟೆಗೆ ಬಿ ಫಾರಂ ಪಡೆದು ಉಪಚುನಾವಣೆ ಸ್ಪರ್ಧಿಸಲು ಬಂದರು. ಸೋತ ಬಳಿಕ ಮತ್ತೆ ಟೂರ್ ಹೋದವರು ಚುನಾವಣೆಗೆ ಸ್ಪರ್ಧಿಸಲು ಮರಳಿದ್ದಾರೆ ಎಂದು ಮಧು ಬಂಗಾರಪ್ಪ ವಿರುದ್ಧ ಲೇವಡಿ ಮಾಡಿದರು.
ಜನರೇ ಐದು ವರ್ಷದ ಪ್ಯಾಕೇಜ್ ನೀಡಿದ್ದರು
ಐದು ವರ್ಷ ಕ್ಷೇತ್ರಕ್ಕಾಗಿ ದುಡಿಯುವುದಕ್ಕೆ ಅಂತಲೇ ಜನ ಐದು ವರ್ಷದ ಪ್ಯಾಕೇಜ್ ನೀಡಿದ್ದರು. ಅದರೆ ಆಗ ಕೆಲಸ ಮಾಡಲಿಲ್ಲ. ಅವರ ಅವಧಿಯಲ್ಲಿ ಯಾವುದಾದರೂ ಒಂದೇ ಒಂದು ಯೋಜನೆ ಪೂರ್ಣವಾಗಿದೆಯೇ ಎಂದು ಕುಮಾರ್ ಬಂಗಾರಪ್ಪ ಸವಾಲು ಹಾಕಿದರು.
ಇದಕ್ಕೂ ಮೊದಲು ಸೊರಬ ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜೊತೆಯಲ್ಲಿ ಕುಮಾರ್ ಬಂಗಾರಪ್ಪ ಪ್ರಚಾರ ನಡೆಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200