ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SORABA : ದ್ಯಾಮವ್ವ ದೇವಿ ಜಾತ್ರೆ ಮಹೋತ್ಸವದ ಅಂಗವಾಗಿ ದೇವಿಗೆ ಹೊಸದಾಗಿ ರಥ ನಿರ್ಮಿಸಲಾಗಿದೆ. ಸೊರಬ ತಾಲೂಕು ರಾಮಪುರದಲ್ಲಿ ರಥಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದಲ್ಲಿ ರಥ ಎಳೆದು ಮೆರಣಿಗೆ ನಡೆಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತವನಂದಿಯ ಕಲಾವಿದ ಸೂರಜ್ ಗುಡಿಗಾರ್ ರಥ ನಿರ್ಮಿಸಿದ್ದಾರೆ. ಹಳೆಯ ದೇವಸ್ಥಾನವನ್ನು 25 ವರ್ಷದ ಹಿಂದೆ ನವೀಕರಿಸಲಾಗಿದೆ. ಈವರೆಗೂ 5 ಬಾರಿ ಜಾತ್ರಾ ಮಹೋತ್ಸವ ನಡೆಸಲಾಗಿದೆ. ಈ ಬಾರಿ ಶಾಸಕರ ಅನುದಾನ ಜೊತೆಗೆ ಗ್ರಾಮದ ವತಿಯಿಂದ ಹಣ ಸಂಗ್ರಹಿಸಿ ನೂತನ ರಥ ನಿರ್ಮಾಣ ಮಾಡಲಾಗಿದೆ. ಮಾರ್ಚ್ 12 ರಿಂದ 20ರವರೆಗೆ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ ಎಂದು ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ದ್ಯಾಮಣ್ಣ ದೊಡ್ಡಮನಿ ಗಣೇಶಪ್ಪ ತಿಳಿಸಿದ್ದಾರೆ.
ಗ್ರಾಮ ಸಮಿತಿ ಉಪಾಧ್ಯಕ್ಷ ಈರಪ್ಪ ದೇಸಾಯಿ, ಕಾರ್ಯದರ್ಶಿ ಉಡಚಪ್ಪ, ಸದಸ್ಯರಾದ ದೇವರಾಜ ವಡ್ಡರ್, ಅಣ್ಣಪ್ಪ ನಾಯಕ್ ಇದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ | ಕಾನೂನು ಕಾಲೇಜಿನಲ್ಲಿ ರಕ್ತದಾನ | ತರಗತಿ ಬಹಿಷ್ಕಾರದ ಎಚ್ಚರಿಕೆ ನೀಡಿದ ಎಸ್‌ಡಿಎಂಸಿ