ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ತಾಲೂಕಿನಾದ್ಯಂತ ತಲೆ ಎತ್ತಿರುವ ಹರ್ಬಲ್ ನ್ಯೂಟ್ರಿಷನ್ ಕ್ಲಬ್’ಗಳ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ವಕೀಲ ಜಿ. ರಾಜಕುಮಾರ್ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
![]() |

ಇತ್ತೀಚಿಗೆ ತಾಲೂಕಿನಾದ್ಯಂತ ಹರ್ಬಲ್ ನ್ಯೂಟ್ರಿಷನ್ ಕ್ಲಬ್ ಎಂಬ ಹೆಸರಿನಲ್ಲಿ ಹಲವಾರು ಕ್ಲಬ್ಗಳು ತಲೆ ಎತ್ತಿವೆ. ಇಲ್ಲಿನ ಸಿಬ್ಬಂದಿ ಜನರ ಬಳಿ ಹೋಗಿ ಆರೋಗ್ಯ ಪರಿಶೀಲಿಸುತ್ತಾರೆ. ತಾವೇ ಒಂದು ಯಂತ್ರ ಇಟ್ಟುಕೊಂಡಿದ್ದು ಆ ಯಂತ್ರದಿಂದ ಜನರಿಗೆ ಚೆಕ್ಕಪ್ ಮಾಡಿ ನಿಮಗೆ ಬಿಪಿ ಇದೆ, ಶುಗರ್ ಇದೆ. ನಿಮ್ಮ ದೇಹದಲ್ಲಿ ಕೆಲ ವಿಟಮಿನ್ ಕೊರತೆ ಇದೆ ಎಂದು ತಿಳಿಸುತ್ತಾರೆ. ಶುಗರ್, ಬಿಪಿ ಇಲ್ಲದೆ ಇದ್ದರೂ ಸದ್ಯದಲ್ಲೇ ಬರುವ ಸಾಧ್ಯತೆ ಇದೆ. ನೀವು ತುಂಬ ದಪ್ಪ ಇದ್ದೀರಿ ಇಲ್ಲವೇ ನೀವು ತುಂಬ ತೆಳ್ಳಗೆ ಇದ್ದೀರಿ. ನೀವು ಕ್ಲಬ್ ಸದಸ್ಯರಾದರೆ ನಾವು ನೀಡುವ ಪೌಡರ್ ಹಾಗೂ ಮಾತ್ರೆ ನೀರಿನಲ್ಲಿ, ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ನಿಮ್ಮ ಈ ಎಲ್ಲ ಸಮಸ್ಯೆ, ಕಾಯಿಲೆಗಳು ಗುಣಮುಖವಾಗುತ್ತವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜತೆಗೆ ಕ್ಲಬ್ ಮೆಂಬರ್ ಆಗಿ, ಈಗ ನೀವು ಮೊದಲಿಗೆ ತಿಂಗಳಿಗೆ 3,500 ರೂ. ನೀಡಿ ಸೇರಿಕೊಳ್ಳಬೇಕು. ನಂತರ ತಿಂಗಳಿಗೆ ನೀಡುವ ಪೌಡರ್ ಹಾಗೂ ಮಾತ್ರೆ ಖರ್ಚು 3,000 ರೂ. ಗಳಿಂದ 5,000 ರೂ.ವರೆಗೂ ಬರುತ್ತದೆ. ಒಂದು ವೇಳೆ ನೀವು ನಮ್ಮ ಕ್ಲಬ್ಗೆ ಹೊಸ ಮೆಂಬರ್ ಸೇರಿಸುತ್ತ ಹೋದರೆ ನಿಮಗೆ ಪಾಯಿಂಟ್ ಕೌಂಟ್ ಆಗಿ ನೀವು ತೆಗೆದುಕೊಳ್ಳುವ ಔಷಧ ಉಚಿತವಾಗುತ್ತದೆ ಹಾಗೂ ಇನ್ನೂ ಹೆಚ್ಚು ಪಾಯಿಂಟ್ ಮಾಡಿದರೆ ಇದರಿಂದ ಸಾಕಷ್ಟು ಹಣದ ಲಾಭ ಇದೆ ಎಂದೆಲ್ಲ ಜನರ ಬಳಿ ಹೇಳುತ್ತಿದ್ದು ಸಾವಿರಾರು ಜನರಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕ್ಲಬ್ ಹಿಂದೆ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದ್ದು ಒಂದು ವೇಳೆ ಇದರ ಸತ್ಯಾಸತ್ಯತೆ ಹಾಗೂ ಗುಣಮಟ್ಟದ ಬಗ್ಗೆ, ಇದರಿಂದ ಇರುವ ಅನುಕೂಲ, ಅನಾನುಕೂಲಗಳ ಬಗ್ಗೆ ತನಿಖೆಯಾಗದೆ ಹೋದರೆ ಅಮಾಯಕ ಜನರು ಶಿಕಾರಿಯಾಗುವ ಸಂಭವ ಇರುವುದರಿಂದ ಹಾಗೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಕ್ತದ ಆದೇಶವನ್ನು ಮಾಡುವ ಮೂಲಕ ಈ ಕ್ಲಬ್ಗಳ ಸತ್ಯಾಸತ್ಯತೆ ಪರಿಶೀಲನೆ ಮಾಡುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಕೀಲರಾದ ಎಂ.ರಾಮಪ್ಪ, ಸಯ್ಯದ್ ಅಹಮದ್, ಸಿ.ಬಿ.ಚಂದ್ರಶೇಖರ್, ಶರತ್, ಜಿ.ದೇವರಾಜ್, ಬಸವರಾಜ್, ಅಶೋಕ್ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200