BREAKING NEWS | ಸೊರಬ ಪುರಸಭೆ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ತೆರವು, ಎಲೆಕ್ಷನ್ ಡೇಟ್ ಫಿಕ್ಸ್

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ ಲೈವ್.ಕಾಂ | 13 ಮೇ 2019

ಸೊರಬ ಪಟ್ಟಣ ಪಂಚಾಯಿತಿ 14 ವಾರ್ಡ್’ಗಳ ಚುನಾವಣೆಗೆ ತಂದಿದ್ದ ತಡೆಯಾಜ್ಞೆ ವಜಾಗೊಂಡಿದ್ದು ಮೇ 14ರಿಂದ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ.

SORABA MAP GRAPHICS 1

ಮೇ 8ರಂದು ವಾರ್ಡ್ ವರ್ಗೀಕರಣ ಸಂಬಂಧ ಚುನಾವಣಾ ಪ್ರಕ್ರಿಯೆಗೆ ನಾಲ್ಕು ವಾರಗಳ ಕಾಲ ಹೈಕೋರ್ಟ್ ತಡೆ ನೀಡಿತ್ತು. ಮೇ 13ರಂದು ಹೈಕೋರ್ಟ್ ಈ ಅರ್ಜಿಗಳನ್ನು ಮರು ಪರಿಶೀಲಿಸಿ ನೆಲಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯಿತಿ ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿದೆ. ಮೇ14ರಿಂದ ಸೊರಬ ಪಟ್ಟಣ ಪಂಚಾಯಿತಿಗೆ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ವೇಳಾಪಟ್ಟಿ ಇಂತಿದೆ.

ಮೇ 14 ಅಧಿಸೂಚನೆ, ಮೇ 21 ನಾಮಪತ್ರ ಸಲ್ಲಿಸಲು ಕೊನೆಯ ದಿನ, 22 ನಾಮಪತ್ರ ಪರಿಶೀಲನೆ, 24 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ, ಜೂನ್ 1 ಮತದಾನ, ಜೂನ್ 6ರಂದು ಮತ ಎಣಿಕೆ ನಡೆಯಲಿದೆ. ಮೇ 13ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ಹೆಚ್ಚಿನ Shimoga News, Shivamogga News ಮತ್ತು SORABA ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 13, 2019

Leave a Comment