SHIVAMOGGA LIVE NEWS | 18 ಮಾರ್ಚ್ 2022
ಅಸಂಖ್ಯ ಭಕ್ತರಿಂದ ಪೂಜಿಸಲ್ಪಿಟ್ಟಿದ್ದ ಸಿಹಿ ಬೇವಿನ ಮರ ಬುಡಮೇಲಾಗಿದೆ. ಶುಕ್ರವಾರ ಸುರಿದ ಭಾರಿ ಮಳೆ, ಗಾಳಿಗೆ ಮರ ಉರುಳಿ ಬಿದ್ದಿದೆ. ಇದು ಭಕ್ತರಲ್ಲಿ ದುಗುಡ, ಆತಂಕ ಹುಟ್ಟಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸೊರಬ ತಾಲೂಕು ಉರಗನಹಳ್ಳಿಯಲ್ಲಿ ಸಿಹಿ ಬೇವಿನ ಮರ ಇದೆ. ಇದರ ಎಲೆಗಳು ಕಹಿ ಅನಿಸುವುದಿಲ್ಲ. ದೂರದೂರುಗಳಿಂದ ಹಲವು ಭಕ್ತರು ಉರಗನಹಳ್ಳಿಗೆ ಬಂದು ಸಿಹಿ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ, ಹರಕೆ ಹೊತ್ತು ಹೋಗುತ್ತಿದ್ದರು.
ಸಿಹಿ ಬೇವಿನ ಮರದ ವಿಶೇಷತೆಗಳೇನು?
ಪಾಯಿಂಟ್ 1 – ಇದಕ್ಕೆ ವಿಷವಿಲ್ಲದ ಬೇವಿನ ಮರ ಎಂಬ ಪ್ರತೀತಿ ಇದೆ. ನಳ ಮಹಾರಾಜನಿಗೆ ಕಾಳ ಸರ್ಪ ದೋಷದಿಂದ ಮುಕ್ತಿ ಕೊಟ್ಟ ನಂತರ ಪರಮೇಶ್ವರನು ಬೇವಿನ ಎಲೆಯನ್ನು ಪ್ರಸಾದವಾಗಿ ಕೊಡುತ್ತಾನೆ. ಆ ಬೇವಿನ ಎಲೆ ಸಿಹಿಯಾಗಿರುತ್ತದೆ. ಪರಮೇಶ್ವರನು ಈ ಸಿಹಿ ಬೇವಿನ ಮರನ್ನು ನೆಟ್ಟಿದ್ದಾನೆ ಎಂಬ ನಂಬಿಕೆ ಇದೆ ಅನ್ನುತ್ತಾರೆ ಅರ್ಚಕರಾದ ಬಸವರಾಜಯ್ಯ ಹಿರೇಮಠ.
ಪಾಯಿಂಟ್ 2 – ಬೇವಿನ ಮರದಲ್ಲಿ ಅಮೃತವಿದೆ ಎಂಬ ನಂಬಿಕೆ ಇದೆ. ಸರ್ಪ ಹುಣ್ಣು, ಚರ್ಮ ರೋಗಗಳು ಸೇರಿದಂತೆ ಹಲವು ಖಾಯಿಲೆಗಳಿಗೆ ಮರದ ಈ ಬೇವಿನ ಎಲೆಯೆ ಮದ್ದಾಗಿತ್ತು.
ಪಾಯಿಂಟ್ 3 – ಶತಮಾನದಷ್ಟು ಹಳೆಯ ಮರ ಇದೆ. ಈ ಬೇವಿನ ಮರದಿಂದ ಹುಟ್ಟಿದ ಸಸಿಗಳ ಎಲೆಗಳು ಕಹಿಯಾಗಿವೆ. ಆದರೆ ಈ ಮರದ ಎಲೆಗಳು ಮಾತ್ರ ಸಿಹಿ ಅನಿಸುತ್ತದೆ.
ಪಾಯಿಂಟ್ 4 – ಪದೇ ಪದೇ ಹಾವುಗಳು ಕಾಣಿಸಿಕೊಳ್ಳುವುದು, ಮನೆಗೆ ಹಾವು ಬರುವುದು, ಹಾವುಗಳ ಕುರಿತು ಭೀತಿ ಇದ್ದವರು ಉರಗನಹಳ್ಳಿಯ ಕಾಳಿಂಗೇಶ್ವರ ಮತ್ತು ಚಾಮುಂಡೇಶ್ವರಿ ತಾಯಿ ದರ್ಶನ ಪಡೆದರೆ ಭೀತಿಯಿಂದ ಪರಾಗಬಹುದು. ಸೋಮವಾರ ಮತ್ತು ಗುರುವಾರ ವಿಶೇಷ ಪೂಜೆ ಇರಲಿದೆ. ಇಲ್ಲಿ ಹೂವು ಇಟ್ಟು ಹೇಳಿಕೆ ಕೇಳುವ ಪದ್ಧತಿಯು ಇದೆ. ಇದೆ ದೇಗುಲದ ಆವರಣದಲ್ಲಿ ಪರಮೇಶ್ವರ ನೆಟ್ಟಿರುವ ವಿಷವಿಲ್ಲದ ಬೇವಿನ ಮರ ಇದೆ.
ಪಾಯಿಂಟ್ 5 – ವಿಷವಿಲ್ಲದ ಬೇವಿನ ಮರ ಬುಡ ಮೇಲಾಗಿರುವ ಸ್ಥಳದಲ್ಲಿ ಮತ್ತೊಂದು ಬೇವಿನ ಗಿಡ ನೆಡುವ ಚಿಂತನೆ ಇದೆ. ಈ ಕುರಿತು ಆಡಳಿತ ಮಂಡಳಿ ದೇವರ ಹೇಳಿಕೆ ಪಡೆಯುವ ಯೋಚನೆಯಲ್ಲಿದೆ.
ಶಾಸಕ ಕುಮಾರ್ ಬಂಗಾರಪ್ಪ ಭೇಟಿ
ಇನ್ನು, ಸಿಹಿ ಬೇವಿನ ಮರ ಬುಡಮೇಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರು ಉರಗನಹಳ್ಳಿಗೆ ಭೇಟಿ ನೀಡಿದ್ದರು. ಮರ ಬಿದ್ದಿರುವ ಸ್ಥಳದ ಪರಿಶೀಲನೆ ನಡೆಸಿದರು. ದೇವಸ್ಥಾನದ ಆಡಳಿತ ಮಂಡಳಿ ಜೊತೆಗೆ ಚರ್ಚೆ ನಡೆಸಿದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200