ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MARCH 2024
SHIRALAKOPPA / SORABA : ಇತಿಹಾಸ ಪ್ರಸಿದ್ಧ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಇನ್ನು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ದೇವಿ ಓಕುಳಿ ಉತ್ಸವ ನಡೆಯಿತು.
ತೊಗರ್ಸಿಯಲ್ಲಿ ವೈಭವದ ರಥೋತ್ಸವ
ಸಾವಿರಾರು ಭಕ್ತರ ಸಮ್ಮುಖದಲ್ಲಿ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ರಥೋತ್ಸವ ನೆರವೇರಿತು. ಮಳೇ ಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಮಹಾಂತ ದೇಶೀಕೇಂದ್ರ ಚಿಕ್ಕ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಬಾಳೆ ಹಣ್ಣು, ಉತ್ತತ್ತಿ, ಕರಿಮೆಣಸು ತೂರಿದರು. ರೈತರು ನೈವೇದ್ಯ ತಯಾರಿಸಿ ಅರ್ಪಿಸಿದರು. ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಭಕ್ತರು ತೊಗರ್ಸಿಗೆ ಆಗಮಿಸಿದ್ದರು.
ಚಂದ್ರಗುತ್ತಿಯಲ್ಲಿ ಓಕುಳಿ ಉತ್ಸವ
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಅವಭ್ರುಥೋತ್ಸವ ಓಕುಳಿ ಉತ್ಸವ ನಡೆಯಿತು. ದೇಗುಲದಿಂದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಓಕುಳಿ ಕಟ್ಟೆಯವರೆಗೆ ತರಲಾಯಿತು. ಪೂಜೆ ಮುಗಿಯುತ್ತಿದ್ದಂತೆ ಕುಂಕುಮದ ನೀರು ಎರಚುವ ಮೂಲಕ ಓಕುಳಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರು ತುಲಾಭಾರ ಸೇವೆ ನೆರವೇರಿಸಿದರು. ಓಕುಳಿ ಉತ್ಸವದ ಅಂಗವಾಗಿ ದೊಡ್ಡ ಸಂಖ್ಯೆಯ ಭಕ್ತರು ನೆರದಿದ್ದರು.
ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ ಮುಂದೂಡಿಕೆ, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422