ಶಿವಮೊಗ್ಗ ಲೈವ್.ಕಾಂ | TALUK NEWS | 25 ಅಕ್ಟೋಬರ್ 2019
ಯಾವ್ಯಾವ ತಾಲೂಕಿನಲ್ಲಿ ಏನೇನೆಲ್ಲ ಸುದ್ದಿಯಾಗಿದೆ. ಇಲ್ಲಿದೆ ಎಲ್ಲ ತಾಲೂಕುಗಳ ಕಂಪ್ಲೀಟ್ ನ್ಯೂಸ್. ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ ಸುದ್ದಿ ನೀಡುವ ಪ್ರಯತ್ನ ಇದು.

ವ್ಯಾಪಾರ ನೀತಿ ಒಪ್ಪಂದಕ್ಕೆ ಸಹಿ ಹಾಕದಂತೆ ಆಗ್ರಹ
ತೀರ್ಥಹಳ್ಳಿ : ಕೇಂದ್ರ ಸರ್ಕಾರವು ಪ್ರದೇಶಿಕ, ಆರ್ಥಿಕ ಸಹಭಾಗಿತ್ವದ RCEP ಮುಕ್ತ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದ್ದು, ಭಾರತದ ರೈತರ ಪಾಲಿಗೆ ಮರಣ ಶಾಸನವಾಗಿದೆ. ಇದರಿಂದ ಅಡಕೆ ಬೆಳೆಗಾರರು, ಹೈನುಗಾರಿಕೆಗೆ ತೀವ್ರ ಹೊಡೆತ ಬೀಳಲಿದೆ. ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ. ಸಮಿತಿ ಜಿಲ್ಲಾಧ್ಯಕ್ಷ ಹೊಸಕೊಪ್ಪ ಸುಂದರೇಶ್, ಪ್ರಮುಖರಾದ ಕೋಣಂದೂರು ಅಶೋಕ್, ಹೊನ್ನಾನಿ ದೇವರಾಜ್, ಪಡುವಳ್ಳಿ ಹರ್ಷೇಂದ್ರ ಕುಮಾರ್ ಸೇರಿದಂತೆ ಹಲವರು ಪ್ರತಿಭೆಟನೆಯಲ್ಲಿದ್ದರು.

ಸರ್ಕಾರಿ ಶಾಲೆ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ : ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ತಿನಿ ಗೌರಿ ಬಿ.ಆರ್.ಕಾರಂತ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಕೋಲ್ಕತ್ತಾದಲ್ಲಿ ಸ್ಪರ್ಧೆ ನಡೆಯಲಿದೆ. ಇತ್ತೀಚೆಗೆ ಬೀದರ್ ಜಿಲ್ಲೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಗೌರಿ ಕಾರಂತ ಮೊದಲ ಸ್ಥಾನ ಗಳಿಸಿದ್ದರು.
ಸಂದೇಶ ಜವಳಿ ಅವಿರೋಧ ಆಯ್ಕೆ
ತೀರ್ಥಹಳ್ಳಿ : ಗೌಡಸಾರಸ್ವತ ಸಮಾಜದ ತಾಲೂಕು ಘಟಕಕ್ಕೆ ನೂತನ ಆಡಳಿತ ಮಂಡಳಿ ರಚನೆ. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೇಶ ಜವಳಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ. ಉಪಾಧ್ಯಕ್ಷರಾಗಿ ಮಂಜುನಾಥ್ ಮಲ್ಯ, ಕಾರ್ಯದರ್ಶಿಯಾಗಿ ರಾಜೇಶ್ ರಾವ್, ಸಹಕಾರ್ಯದರ್ಶಿಯಾಗಿ ಮಹಿಮಾ ಶೆಣೈ, ಖಜಾಂಚಿಯಾಗಿ ರಾಮದಾಸ್ ಭಟ್ ಆಯ್ಕೆ.
ತಾಲೂಕಿನ ಮಾಜಿ ವೈದ್ಯಾಧಿಕಾರಿಗೆ ಗೌರವ
ತೀರ್ಥಹಳ್ಳಿ : ತಾಲೂಕು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಡಾ.ವೀರಣ್ಣ ಅವರಿಗೆ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ, ಆರೋಗ್ಯ ಇಲಾಖೆ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ.ಸತೀಶ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರದ ರಾಘವೇಂದ್ರ, ಉಷಾ.ಕೆ.ಡಿ, ಆರೋಗ್ಯ ಇಲಾಖೆ ನೌಕರರ ಸಂಘದ ಶಿವಶಂಕರ್, ಗಿರಿ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಕೋಣಂದೂರು ಸ್ಕೂಲ್’ಗೆ ಮೂರನೆ ಸ್ಥಾನ
ಕೋಣಂದೂರು : ಚಿಕ್ಕಮಗಳೂರಿನಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ತೃತೀಯ ಸ್ಥಾನ. ‘ಜಗದ ಬಿರುಕಿಗೆ ಗಾಂಧಿ ಮದ್ದು’ ನಾಟಕ ಪ್ರದರ್ಶಿಸಿದ್ದರು.

ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕಾರ್ಮಿಕನಿಗೆ ಹೃದಯಾಘಾತ
ಶಿಕಾರಿಪುರ : ಸಂಡ ಕೆಎಂಎಫ್ ಕೈಗಾರಿಕಾ ಪ್ರದೇಶದಲ್ಲಿ ಜೋಳದ ಚೀಲ ಹೊರುವಾಗ ಕೂಲಿ ಕಾರ್ಮಿಕನಿಗೆ ಹೃದಯಾಘಾತ. ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈರಪ್ಪ ಮಾವುಲಿ (40) ಮೃತ ಕೂಲಿ ಕರ್ಮಿಕ. ಮೃತ ಈರಪ್ಪಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಕಾರ್ಮಿಕ ಸಂಘಟನೆ ಮನವಿ ಮಾಡಿದೆ.

ಕಾರುಗಳ ಮುಖಾಮುಖಿ ಡಿಕ್ಕಿ
ಸಾಗರ : ಸರ್ಕಾರಿ ಆಸ್ಪತ್ರೆ ಎದುರು ಗುರುವಾಗ ವ್ಯಾಗನಾರ್ ಮತ್ತು ಓಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿ. ಎರಡು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ. ಕಾರುಗಳ ಮುಂಭಾಗ ಜಖಂ. ವ್ಯಾಗನಾರ್ ಕಾರಿನ ಮುಂಭಾಗ ಚರಂಡಿಯಲ್ಲಿ ನಿಂತಿದೆ.

ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮತ್ತೆ ಕ್ಲಾಸ್
ಸಾಗರ : ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮತ್ತೆ ನೀತಿ ಪಾಠ ಹೇಳಿದೆ ನಗರಸಭೆ ಅಧಿಕಾರಿಗಳು. ರಾತ್ರಿ ಕಾರ್ಯಾಚರಣೆ ನಡೆಸಿ, ಕಸ ಎಸೆಯುತ್ತಿದ್ದ ಜನರಿಗೆ ಜಾಗೃತಿ. ನಗರಸಭೆ ವಾಹನಕ್ಕೆ ಕಸ ಹಾಕುವಂತೆ ತಿಳಿವಳಿಕೆ. ಎಲ್ಲೆಂದರಲ್ಲಿ ದಂಡ ಹಾಕುವ ಎಚ್ಚರಿಕೆ.

‘ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ’
ಶಿವಮೊಗ್ಗ : ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಸಾಧ್ಯವೆ ಇದಲ್ಲ. ಕೆಜೆಪಿ ಹುಟ್ಟಿಕೊಳ್ಳದೆ ಇದ್ದರೆ ಅವರು ಸಿಎಂ ಆಗಲು ಸಾಧ್ಯವೆ ಇರಲಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಹಿಂದುಳಿದವರು – ದಲಿತರನ್ನು ಉದ್ಧಾರ ಮಾಡಿದ್ದೇನೆ ಅನ್ನುತ್ತಾರೆ. ನಿಜವಾಗಿಯು ಸಿದ್ದರಾಮಯ್ಯ ಹಾಗೆ ಮಾಡಿದ್ದರೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿತ್ತು ಎಂದಿದ್ದಾರೆ.

ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಈಶ್ವರಪ್ಪ
ಶಿವಮೊಗ್ಗ : ಭಾರಿ ಮಳೆಗೆ ಆಲ್ಕೊಳದಲ್ಲಿ ಹಾನಿಗೀಡಾದ ಮನೆಗಳನ್ನು ಸಚಿವ ಕೆ.ಎಸ್.ಈಶ್ವರಪ್ಪ ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ ಶಿವಕುಮಾರ್, ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಮಳೆಯಿಂದ ಹಾನಿಗೀಡಾದ ಸರ್ಕಾರಿ ಶಾಲೆಗಳ ರಿಪೇರಿ
ಶಿವಮೊಗ್ಗ : ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಗೀಡದ ಸರ್ಕಾರಿ ಶಾಲೆ, ಅಂಗನವಾಡಿಗಳ ದುರಸ್ಥಿಗೆ ಅನುದಾನ ಬಿಡುಗಡೆಯಾಗಿದೆ. ನ.5ರ ಒಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿ, ಕಾಮಗಾರಿ ಆರಂಭಿಸಲಾಗುತ್ತದೆ. ಕಟ್ಟಡ ದುರಸ್ಥಿತಿಗೆ 9 ಕೋಟಿ ರೂ., ಶೌಚಾಲಯಗಳ ದುರಸ್ಥಿತಿಗೆ 4.50 ಕೋಟಿ ರೂ. ವೆಚ್ಚ ಮಾಡಾಗುತ್ತದೆ. ಎರಡ್ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಳೆಹಾನಿ ಪರಿಹಾರ ಕುರಿತ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ.


ಹುಲಿಕಲ್’ನಲ್ಲಿ ಜೋರು ಮಳೆ
ಹೊಸನಗರ : ತಾಲೂಕಿನಾದ್ಯಂತ ಮುಂದುವರೆದ ಮಳೆ. ಕಳೆದ 24 ಗಂಟೆ ಅವಧಿಯಲ್ಲಿ ಹುಲಿಕಲ್’ನಲ್ಲಿ ಅತಿ ಹೆಚ್ಚು 81 ಮಿ.ಮೀ ಮಳೆಯಾಗಿದೆ. ಮಾಣಿ ಜಲಾಶಯ ಪ್ರದೇಶದಲ್ಲಿ 68 ಮಿ.ಮೀ, ಯಡೂರು 59 ಮಿ.ಮೀ, ಮಾಸ್ತಿಕಟ್ಟೆ 72 ಮಿ.ಮೀ, ಚಕ್ರಾ ಜಲಾನಯನ ಪ್ರದೇಶದಲ್ಲಿ 56 ಮಿ.ಮೀ, ಸಾವೇಹಕ್ಲು ಜಲಾನಯನ ಪ್ರದೇಶದಲ್ಲಿ 64 ಮಿ.ಮೀ ಮಳೆಯಾಗಿದೆ. ಆರೋಡಿ, ನಿಟ್ಟೂರು, ಸಂಪೇಕಟ್ಟೆ, ಕಾನಗೋಡು, ಕಾರಗಡಿ ಸೇರಿದಂತೆ ತಾಲೂಕಿನ ವಿವಿಧೆಡೆ ಮುಂದುವರೆದ ಮಳೆ.

ಡಿಕೆಶಿ ಭವಿಷ್ಯದ ನಾಯಕ
ಹೊಸನಗರ : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿರುವುದು ಸತ್ಯಕ್ಕೆ ಸಂದ ಜಯ. ಅವರನ್ನು ಮೂಲೆಗುಂಪು ಮಾಡಲು ಬಿಜೆಪಿ, ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ. ಮುಂದೆ ಡಿ.ಕೆ.ಶಿವಕುಮಾರ್ ಅವರು ಆರೋಪ ಮುಕ್ತವಾಗಲಿದ್ದಾರೆ. ರಾಜ್ಯದ ಪ್ರಭಾವಿ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಪ್ರಮುಖ ಹಾಲಗದ್ದೆ ಉಮೇಶ್ ಪತ್ರಿಕಾ ಹೇಳಿಕೆ.
ಮಂಕಿ ಪಾರ್ಕ್’ಗಾಗಿ ಬೆಂಗಳೂರಿನಲ್ಲಿ ಮೀಟಿಂಗ್
ಹೊಸನಗರ : ಚಕ್ರ ಅಭಯಾರಣ್ಯದಲ್ಲಿ ಮಂಕಿಪಾರ್ಕ್ ಸ್ಥಾಪನೆ ಆಗಲಿದೆ ಎಂದು ಶೋಧಾ ಪಾರ್ಮರ್ಸ್ ಪ್ರಡ್ಯೂಸರ್ ಕಂಪನಿ ಚೇರ್ಮನ್ ಪುರುಷೋತ್ತಮ ಬೆಳ್ಳಕ್ಕೆ ತಿಳಿಸಿದ್ದಾರೆ. ನಗರ ಹೋಬಳಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಈ ಭಾಗದ ರೈತರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ನವೆಂಬರ್ 5ರಂದು ಈ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ನಾವು ಸಭೆಗೆ ತೆರಳಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗ್ರಾಮಠಾಣಾ ಜಾಗದಲ್ಲಿ ಖಾತೆ, ರದ್ಧತಿಗೆ ಪ್ರತಿಭಟನೆ
ಆನವಟ್ಟಿ : ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಗ್ರಾಮಠಾಣಾ ಜಾಗವನ್ನು ಕೂಡಲೆ ತೆರವುಗೊಳಿಸಬೇಕು ಮತ್ತು ಖಾತೆಯನ್ನು ವಜಾಗೊಳಿಸಬೇಕು ಎಂದು ಒತ್ತಾಯ. ತಲ್ಲೂರು ಗ್ರಾಮ ಪಂಚಾಯಿತಿ ಮುಂದೆ ಹುಣಸವಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ. ಇಓ ಚನ್ನವೀರಸ್ವಾಮಿ ಸ್ಥಳಕ್ಕೆ ಭೇಟಿ. ಕ್ರಮದ ಭರವಸೆ.